Saturday, May 10, 2025

Latest Posts

POPCORN GST :ನಿರ್ಮಲಾ ಸೀತಾರಾಮನ್ ಟ್ರೋಲ್, ಪಾಪ್ ಕಾರ್ನ್ GST ಜೋರಾಯ್ತು ಜಟಾಪಟಿ

- Advertisement -

ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇತ್ತೀಚಿಗಷ್ಟೇ ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಪಾಪ್ ಕಾರ್ನ್ ಗೆ ಮೂರು ರೀತಿಯಲ್ಲಿ ಜಿಎಸ್ ಟಿ ವಿಧಿಸಲು ತೀರ್ಮಾನಿಸಿರುವುದು ರಾಜಕೀಯ ತಿರುವು ಪಡೆದಿದೆ. ಇನ್ನು ಕೇಂದ್ರ ಸಚಿವೆಯ ಈ ತೀರ್ಮಾನವನ್ನ ಉದ್ಯಮಿಗಳು ಕೂಡ ಟೀಕಿಸಿದ್ದಾರೆ.

ಪ್ಯಾಕ್ ಮಾಡದ ಪಾಪ್ ಕಾರ್ನ್ ಗೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇನ್ನು, ಮೊದಲೇ ಪ್ಯಾಕ್‌ ಮಾಡಿದ, ಉಪ್ಪು ಮಿಶ್ರಿತ ಪಾಪ್‌ಕಾರ್ನ್‌ಗೆ ಶೇ. 12 ಹಾಗೂ ಸಕ್ಕರೆ ಮಿಶ್ರಿತ ಕೆರಾಮೆಲ್‌ ಪಾಪ್‌ಕಾರ್ನ್‌ಗೆ ಶೇ. 18ರಷ್ಟು ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿದೆ.

 

ಪಾಪ್‌ಕಾರ್ನ್‌ಗೆ ಮೂರು ವಿಧದ ಜಿಎಸ್‌ಟಿ ವಿಧಿಸಿರುವುದನ್ನು ಪ್ರತಿಪಕ್ಷಗಳು ಟೀಕಿಸಿವೆ. ”ಪಾಪ್‌ಕಾರ್ನ್‌ಗೆ ಮೂರು ರೀತಿಯ ತೆರಿಗೆ ವಿಧಿಸುವುದನ್ನು ಜನ ಟ್ರೋಲ್‌ ಮಾಡುತ್ತಿರುವುದೇ ಸರಕಾರದ ನಿರ್ಧಾರ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. ಜನರಿಗೆ ಸರಳ ಹಾಗೂ ಸುಲಭದ ತೆರಿಗೆ ಬೇಕೇ ಹೊರತು, ಹೆಚ್ಚಿನ ಸುಲಿಗೆ ಮಾಡುವುದಲ್ಲ. ಒಂದೇ ಉತ್ಪನ್ನಕ್ಕೆ ಮೂರು ರೀತಿಯ ತೆರಿಗೆ ವಿಧಿಸಿದ್ದು ಸರಿಯಲ್ಲ,’ ಅಂತ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ.

“ಕೇಂದ್ರ ಬಜೆಟ್‌ ಮಂಡನೆಗೆ ಕೇವಲ 40 ದಿನಗಳು ಉಳಿದಿರುವಾಗಲೇ ಇಂತಹ ತೀರ್ಮಾನಗಳನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಹಾಗೂ ಹಣಕಾಸು ಸಚಿವರು ಏನು ಮಾಡಲು ಹೊರಟಿದ್ದಾರೆ,” ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಕೇಂದ್ರ ಬಜೆಟ್‌ ಮಂಡನೆಗೆ ಕೇವಲ 40 ದಿನಗಳು ಉಳಿದಿರುವಾಗಲೇ ಇಂತಹ ತೀರ್ಮಾನಗಳನ್ನು ಘೋಷಣೆ ಮಾಡುವ ಮೂಲಕ ಪ್ರಧಾನಿ ಹಾಗೂ ಹಣಕಾಸು ಸಚಿವರು ಏನು ಮಾಡಲು ಹೊರಟಿದ್ದಾರೆ,” ಅಂತ ಅವರು ಪ್ರಶ್ನಿಸಿದ್ದಾರೆ.

 

ಪಾಪ್‌ಕಾರ್ನ್‌ಗೆ ತೆರಿಗೆ ವಿಧಿಸಿರುವ ವಿಚಾರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಬಗ್ಗೆ ಟ್ರೋಲ್‌ಗಳು ಹರಿದಾಡುತ್ತಿವೆ. ”ಈರುಳ್ಳಿ ಬೆಲೆ ಜಾಸ್ತಿಯಾದಾಗ ನಾನು ಈರುಳ್ಳಿ ಸೇವಿಸುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಈಗ ಅವರು ನಾನು ಪಾಪ್‌ಕಾರ್ನ್‌ ತಿನ್ನಲ್ಲ ಎಂಬುದಾಗಿ ಹೇಳುತ್ತಾರೆ,” ಅಂತ ಜನ ಕುಟುಕಿದ್ದಾರೆ.

“ಕೆಲವೇ ದಿನಗಳಲ್ಲಿ ಪಾನಿಪೂರಿಗೂ ಜಿಎಸ್‌ಟಿ ವಿಧಿಸಿದರೆ ಅಚ್ಚರಿ ಇಲ್ಲ,” ಅಂತ ಒಂದಷ್ಟು ಜನ ಆತಂಕಪಟ್ಟರೆ, ‘ಇದು ಈ ವರ್ಷದ ಜೋಕ್‌,” ಅಂತ ಕೂಡ ಮತ್ತೊಂದಿಷ್ಟು ಜನ ವ್ಯಂಗ್ಯವಾಡಿದ್ದಾರೆ.

 

ಇವೆಲ್ಲ ತರ್ಕಕ್ಕೆ ನಿಲುಕದ ತೀರ್ಮಾನಗಳು. ಜನರಿಗೆ ಜಿಎಸ್ ಟಿ ಟ್ಯಾಕ್ಸ್ ಹಾಕೋ ಬದಲು, ಗುಡ್‌ ಆ್ಯಂಡ್‌ ಸಿಂಪಲ್‌ ಟ್ಯಾಕ್ಸ್‌ ಬೇಕು. ಜಿಎಸ್‌ಟಿ ಮಂಡಳಿ ಸಭೆಯ ತೀರ್ಮಾನವು ರಾಷ್ಟ್ರೀಯ ವಿಪತ್ತಿಗೆ ಸಮನಾದುದು. ಜಿಎಸ್‌ಟಿ ಸರಳೀಕರಣದ ಕುರಿತು ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕು ಅಂತ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಆಗ್ರಹಿಸಿದ್ದಾರೆ.

- Advertisement -

Latest Posts

Don't Miss