Thursday, December 26, 2024

Latest Posts

ಅದ್ಧೂರಿಯಾಗಿ ನೆರವೇರಿದ ‘ಬೆಲ್ ಬಾಟಂ-2’ ಸಿನಿಮಾ ಮಹೂರ್ತ…! ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ ಅಪ್ಪು..

- Advertisement -

ಗಾಂಧಿನಗರಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಶೆಟ್ಟಿ ಹೀರೋ ಆಗಿ ಬಣ್ಣ ಹಚ್ಚಿದ ಸಿನಿಮಾ ಬೆಲ್ ಬಾಟಂ. 2019ರಲ್ಲಿ ತೆರೆಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಹೀರೋ ಆಗಿ ಮಿಂಚಿದ್ದ ರಿಷಬ್ ಗೂ ನೇಮೂ-ಫೇಮೂ ತಂದುಕೊಟ್ಟಿದ್ದ ‘ಬೆಲ್ ಬಾಟಂ’ ಸಿನಿಮಾದ ಸೀಕ್ವೆಲ್ ಗಿಂದು ಚಾಲನೆ ಸಿಕ್ಕಿದೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇಗುಲದಲ್ಲಿ ಇಂದು ‘ಬೆಲ್ ಬಾಟಂ-2’ ಸಿನಿಮಾದ ಮುಹೂರ್ತ ನೆರವೇರಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರರ್ ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಡಿಟೆಕ್ಟಿವ್ ದಿವಾಕರನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚಿದ್ರು, ರಿಷಬ್ ಗೆ ಜೋಡಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಬೆಲ್ ಬಾಟಂ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಲಾವಿದರು ಬೆಲ್ ಬಾಟಂ-2 ಇರಲಿದ್ದಾರೆ. ಇವರ ಜೊತೆಗೆ ನಟಿ ತಾನ್ಯ ಹೋಪ್ ದಿವಾಕರನಿಗೆ ಸಾಥ್ ಕೊಡಲಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಜೇಮ್ಸ್ ಬಾಂಡ್ ಸ್ಟೈಲಿನ ಕಾರ್ ಡಿಸೈನ್ ಮಾಡಲಾಗ್ತಿದೆ ಎನ್ನಲಾಗ್ತಿದೆ. ಇನ್ನು, ಸಿನಿಮಾಕ್ಕೆ ಸಂತೋಷ್ ಕುಮಾರ್ ಕೆ.ಸಿ.ಬಂಡವಾಳ ಹೂಡಲಿದ್ದು, ಅಂಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರದಲ್ಲಿರಲಿದೆ. ದಯಾನಂದ ಟಿ.ಕೆ ಹೊಸ ಕಥೆ ಎಣೆದಿದ್ದು, ಚೆಂಡು ಹೂವಿನ ಕೇಸ್ ಪ್ರಕರಣದೊಂದಿಗೆ ರಿಷಬ್ ನಾಯಕನಾಗಿ ಮಿಂಚಲಿದ್ದಾರೆ.

- Advertisement -

Latest Posts

Don't Miss