Monday, December 23, 2024

Latest Posts

‘ಸಲಾರ್’ ಸಿನಿಮಾಕ್ಕೆ ಡಾರ್ಲಿಂಗ್ ಪ್ರಭಾಸ್ ಕೇಳಿದ್ದು ಇಷ್ಟೊಂದು ಕೋಟಿನಾ…?

- Advertisement -

ಬಾಹುಬಲಿ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಡಾರ್ಲಿಂಗ್ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಿರುವಾಗ ಪ್ರಭಾಸ್ ಸಂಭಾವನೆ ದುಪ್ಪಟ್ಟೆ ಆಗಿರುತ್ತೇ. ಖಂಡಿತ, ಕೆಜಿಎಫ್ ಕರ್ತೃ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-2 ಬಳಿಕ ಕೈಗೆತ್ತಿಕೊಳ್ತಿರುವ ಸಿನಿಮಾ ಸಲಾರ್. ಸ್ಯಾಂಡಲ್ ವುಡ್ ನ ದೊಡ್ಡ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮಂಸ್ ಬ್ಯಾನರ್ ಅಡಿಯಲ್ಲಿ ರೆಡಿಯಾಗ್ತಿರುವ ಈ ಸಿನಿಮಾದಲ್ಲಿ ನಟಿಸಲು ಪ್ರಭಾಸ್ ಪಡೆದಿರೋ ಸಂಭಾವನೆ ಕೇಳಿ ಗಾಂಧಿನಗರ ಶಾಕ್ ಆಗಿದೆ.

ಸಲಾರ್ ಚಿತ್ರಕ್ಕೆ 100 ಕೋಟಿ ಪಡೆದ್ರಾ ಪ್ರಭಾಸ್..?

ಸಲಾರ್ ಸಿನಿಮಾದಲ್ಲಿ ನಟಿಸೋದಿಕ್ಕೆ ಮಿಸ್ಟರ್ ಫರ್ಪೆಕ್ಷನಿಸ್ಟ್ ಪ್ರಭಾಸ್ ನೂರು ಕೋಟಿ ಡಿಮ್ಯಾಂಡ್ ಇಟ್ಟಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ಪ್ಯಾನ್ ಇಂಡಿಯಾ ಸಿನಿಮಾ ಸಂಭಾವನೆ 100 ಕೋಟಿ ಇದೆ ಎನ್ನಲಾಗ್ತಿದೆ. ಹೀಗಾಗಿ ಡಾರ್ಲಿಂಗ್ ನೂರು ಕೋಟಿ ಕೇಳಿದ್ದಾರಂತೆ. ಸದ್ಯ ಈ ವಿಚಾರ ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿಯೂ ಗಿರಕಿ ಹೊಡೆಯುತ್ತಿದೆ.

 ಬಿಗ್ ಬಜೆಟ್ ಸಿನಿಮಾ…?

ಹಾಗ್ ನೋಡಿದ್ರೆ ಹೊಂಬಾಳೆ ಫಿಲ್ಮಂಸ್ ಕೆಜಿಎಫ್ ಸಿನಿಮಾವನ್ನು ಬಿಗ್ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣ ಮಾಡಿತ್ತು. ಹೀಗಾಗಿ ಸಲಾರ್ ಸಿನಿಮಾ ಕೂಡ ದೊಡ್ಡ ಬಜೆಟ್ ಸಿನಿಮಾವೆಂದು ಅಂದಾಜಿಸಲಾಗ್ತಿದೆ. ಪ್ರಭಾಸ್ ಗೆ ನೂರು ಕೋಟಿ ರೆಮ್ಯೂನರೇಷನ್ ಕೊಟ್ಟಿರುವಾಗ ಸಂಭಾವನೆ ದುಪ್ಪಟ್ಟು ಇರಲಿದೆ ಅನ್ನೋ ಲೆಕ್ಕಾಚಾರ ಗಾಂಧಿನಗರದಲ್ಲಿ ಶುರುವಾಗಿದೆ.

ಸದ್ಯ ರಾಧೇ-ಶ್ಯಾಮ್ ಸಿನಿಮಾದಲ್ಲಿ ನಟಿಸ್ತಿರುವ ಪ್ರಭಾಸ್ ಈ ಸಿನಿಮಾಕ್ಕೆ 80 ರಿಂದ 90 ಕೋಟಿ ಪಡೆದಿದ್ದಾರಂತೆ.  

- Advertisement -

Latest Posts

Don't Miss