Tuesday, May 28, 2024

Latest Posts

ಬಿಎಸ್‌ವೈ ಸೇರಿ ಹಲವು ಬಿಜೆಪಿ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಪ್ರಹ್ಲಾದ್ ಜೋಶಿ

- Advertisement -

Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ದಿವ್ಯಪ್ರಭು ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ವಿಪಕ್ಷ ಉಪನಾಯಕ ಜಗದೀಶ ಶೆಟ್ಟರ್, ಜೋಶಿ ಪತ್ನಿ ಜ್ಯೋತಿ ಜೋಶಿ ಸಾಥ್ ನೀಡಿದ್ದಾರೆ.

ಎರಡು ಮತ್ತು ಮೂರನೇ ಸೆಟ್ ನಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು,  ಮೊದಲ ಸೆಟ್‌ಗೆ ಮಾಜಿ ಸಿಎಂಗಳಾದ ಬಿಎಸ್‌ವೈ, ಜಗದೀಶ ಶೆಟ್ಟರ್ ಸಾಥ್ ಕೊಟ್ಟರೆ,  ಎರಡನೇ ಸೆಟ್‌ಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕರಾದ ಅಮೃತ ದೇಸಾಯಿ, ವೀರಭದ್ರಪ್ಪ ಹಾಲಹರವಿ, ಸಾಥ್ ಕೊಟ್ಟಿದ್ದಾರೆ. ಮೂರನೇ ಸೆಟ್‌ಗೆ ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿಜಯ ಸಂಕೇಶ್ವರ ಸಾಥ್ ಕೊಟ್ಟಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಜೋಶಿ, ಇವತ್ತು ಶುಭ ಮುಹೂರ್ತ ದಲ್ಲಿ ನಾಮಪತ್ರ ಸಲ್ಲಿಸಿದ್ದೆನೆ. ಯಡಿಯೂರಪ್ಪ, ಬೊಮ್ಮಾಯಿ, ವಿಜಯ ಸಂಕೇಶ್ವರ ಕೋರೆ, ಅರವಿಂದ ಬೆಲ್ಲದ, ಸಿಸಿ ಪಾಟೀಲ, ಮಹೇಶ ಟೆಂಗಿನಕಾಯಿ ಎಲ್ಲರೂ ಭಾಗಿಯಾಗಿದ್ದರು. ಅಭೂತಪೂರ್ವ ಈ ಮೆರವಣಿಗೆ ವಿಜಯದ ಮೆರವಣಿಗೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ನನಗೆ ಒಳ್ಳೆಯ ರಿಸ್ಪಾನ್ಸ್ ಇದೆ ಎಂದಿದ್ದಾರೆ.

ಐದು ಹತ್ತು ವರ್ಷ ಆಡಳಿತವಲ್ಲ, ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ: ಜೋಶಿ ವ್ಯಂಗ್ಯ

ಪ್ರಧಾನಿ ಮೋದಿಯಿಂದ ಮಂಗಳೂರಿನಲ್ಲಿ ರೋಡ್‌ ಶೋ: ಕೇಸರಿಮಯವಾದ ಕುಡ್ಲ..

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

- Advertisement -

Latest Posts

Don't Miss