ವೀರಂ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ರಿಲೀಸ್

www.karnatakatv.net : ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಸಿನಿಮಾ ವೀರಂ  ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ವೊಂದನ್ನ ರಿಲೀಸ್  ಮಾಡುವ ಮೂಲಕ ಅವರಿಗೆ ಶುಭಾಷಯ ತಿಳಿಸಿದ್ದಾರೆ..ಈ ಚಿತ್ರದಲ್ಲಿ ಪ್ರಜ್ವಲ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.. ಸದ್ಯ ಹೊರಬಂದಿರುವ ಈ ಪೋಸ್ಟರ್ ನಲ್ಲಿ ಪ್ರಜ್ವಲ್ ಕೈ ಮೇಲೆ ವಿಷ್ಣುವರ್ಧನ್ ಅವರ ಹಚ್ಚೆ ಹಾಕಿಸಿಕೊಂಡಿದ್ದು, ಬಾಯಲ್ಲಿ ಲಾಂಗ್ ಹಿಡಿದು ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ..  ಖದರ್ ಕುಮಾರ್ ಅವ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ನಟಿಸ್ತಿದ್ದಾರೆ.. ಶಶಿಧರ್ ಕೆ.ಎಂ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.. ಇದರ  ಜೊತೆಗೆ ಅರ್ಜುನ್ ಗೌಡ ಚಿತ್ರತಂಡ ಕೂಡ ಪೋಸ್ಟರ್ ರಿವೀಲ್ ಮಾಡಿ ಪ್ರಜ್ವಲ್ ಗೆ ಬರ್ತ್ ಡೇ ವಿಶ್ ಮಾಡಿದೆ.. ಈ ಚಿತ್ರವನ್ನ ಶಂಕರ್ ನಿರ್ದೇಶನ ಮಾಡ್ತಿದ್ದು, ಪ್ರಜ್ವಲ್ ಇಲ್ಲಿ ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನಲಾಗ್ತಿದೆ.. ಇನ್ನೂ ಈ ಚಿತ್ರದಲ್ಲಿ ನಟಿ ಪ್ರಿಯಾಂಕ ತಿಮ್ಮಯ್ಯ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.. ರಾಮು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ..

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

About The Author