Tuesday, April 30, 2024

Latest Posts

ಸಖತ್ ಸೌಂಡ್ ಮಾಡ್ತಿದೆ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಟ್ರೇಲರ್..!

- Advertisement -

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಇನ್ಸ್ ಪೆಕ್ಟರ್ ವಿಕ್ರಂ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಫೆಬ್ರವರಿ 5ರಂದು ಸಿನಿಮಾ ಮಂದಿರ ಲಗ್ಗೆ ಇಡ್ತಿರೋ ಮೊದಲ ಸ್ಟಾರ್ ಹೀರೋ ಸಿನಿಮಾ ಇದಾಗಿದ್ದು, ಸದ್ಯ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.

ಖಾಕಿ ಖದರ್ ನಲ್ಲಿ ಮಿಂಚೋ ಪ್ರಜ್ವಲ್ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾದ ಮೇಕಿಂಗ್, ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಎಲ್ಲವೂ ಅದ್ಭುತವಾಗಿ ಟ್ರೇಲರ್ ನಲ್ಲಿ ಮೂಡಿ ಬಂದಿದ್ದು, ಸಿನಿ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟು ಮಾಡ್ತಿದೆ. ಈಗಾಗ್ಲೇ ರಿಲೀಸ್ ಆಗಿರುವ ಇನ್ಸ್ ಪೆಕ್ಟರ್ ವಿಕ್ರಂ ಹಾಡುಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನೂ, ಪ್ರಜ್ವಲ್ ಗೆ ಜೋಡಿಯಾಗಿ ಜಾಕಿ ಭಾವನಾ ನಟಿಸಿದ್ದು, ವಿಲನ್ ಗೆಟಪ್ ನಲ್ಲಿ ರಘು ಮುಖರ್ಜಿ ಮಿಂಚಿದ್ದಾರೆ. ಸ್ಪೆಷಲ್ ರೋಲ್ ವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದು, ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

ಸಿನಿಮಾಕ್ಕೆ ಶ್ರೀ ನರಸಿಂಹ ಆ್ಯಕ್ಷನ್ ಕಟ್ ಹೇಳಿದ್ದು, ವಿಖ್ಯಾತ ಬಂಡವಾಳ ಹೂಡಿದ್ದಾರೆ.

- Advertisement -

Latest Posts

Don't Miss