Dharwad News: ಕಾಣೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಕೆಲಗೇರಿ ಕೆರೆಯಲ್ಲಿ ಈ ಘಟನೆ ನಡೆದಿದೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಂಗಳಗಟ್ಟಿ ಗ್ರಾಮದ ಯುವಕ ಪ್ರಜ್ವಲ್ ಹನಮಂತಗೌಡ ಪಾಟೀಲ್ ಕಾಣೆಯಾಗಿದ್ದನು. ಈ ಕುರಿತಂತೆ ದೂರು ಕೂಡಾ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮಾಡುತ್ತಿರುವ ನಡುವೆ ಪ್ರಜ್ವಲನ ಮೃತ ದೇಹ ಕೆಲಗೇರಿ ಕೆರೆಯಲ್ಲಿ ಪತ್ತೆಯಾಗಿದೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಯುವಕನಾಗಿದ್ದು ಜನೆವರಿ 9 ರಂದು ಕಾಣೆಯಾಗಿದ್ದನು. ಓಸ್ತವಾಲ್ ಟಾವರ್ ನಲ್ಲಿನ ಆಸ್ಪತ್ರೆಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ. ಕೆಲಗೇರಿ ಕೆರೆಯಲ್ಲಿ ಪ್ರಜ್ವಲ ಶವ ಪತ್ತೆಯಾಗಿದ್ದು ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಸಾವಿಗೆ ಕಾರಣವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
‘ಜ.22ಕ್ಕೆ ವಿಶೇಷ ವಿಮಾನದಲ್ಲಿ ನಾನು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ಹೋಗಲಿದ್ದೇನೆ.’
‘ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು’
‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’