Hassan News: ಹಾಸನ: ಅಶ್ಲೀಲ ವೀಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಾಸಕ ಎ.ಮಂಜು ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.
ಹಾಸನದ ಸೆನ್ ಠಾಣೆಯಲ್ಲಿ ಎ.ಮಂಜು ವಿಚಾರಣೆ ಎದುರಿಸಿದ್ದು, ಅರ್ಧಗಂಟೆಗೂ ಹೆಚ್ಚು ಕಾಲ ಎಸ್‌ಐಟಿ ಅಧಿಕಾರಿಗಳು ಮಂಜುರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಯಾಕೆ ಎ.ಮಂಜುರನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರೆ, ಈ ಪೆನ್‌ಡ್ರೈವ್ ಹಂಚಿದ್ದ ನವೀನ್ ಗೌಡ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಬಿಡುಗಡೆ ಮಾಡಿ, ಈ ಪೆನ್‌ಡ್ರೈವ್‌ನ್ನು ನಾನು ಎ.ಮಂಜುಗೆ ಕೊಟ್ಟಿದ್ದೆ ಎಂದು ಹೇಳಿದ್ದ. ಸದ್ಯ ನವೀನ್ ಗೌಡನನ್ನು ಬಂಧಿಸಿ, ಎಸ್‌ಐಟಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ.
ಎ.ಮಂಜು ಸೇರಿ ಇನ್ನು ಹಲವರ ಹೆಸರನ್ನು ನವೀನ್ ಗೌಡ ಹೇಳಿದ್ದು, ಯಾರ್ಯಾರ ಹೆಸರನ್ನು ಹೇಳಿದ್ದಾನೋ, ಅವರೆಲ್ಲರನ್ನೂ ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ. ಹಾಸನದ ಪೊಲೀಸ್ ಠಾಣೆಯಲ್ಲಿ ಎಎಸ್‌ಪಿ ತಮ್ಮಯ್ಯ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಇನ್ನೊಂದೆಡೆ ಭವಾನಿ ರೇವಣ್ಣ ನಿವಾಸಕ್ಕೆ ಎಸ್‌ಐಟಿ ಟೀಂ ಮಹಿಳಾ ಅಧಿಕಾರಿ ಆಗಮಿಸಿದ್ದು, ಮನೆಯ ಬಳಿ ಭವಾನಿಗಾಗಿ ಕೆಲ ಕಾಲ ಕಾದು ಕೂತಿದ್ದಾರೆ. ಆದರೆ ಹೊಳೆನರಸಿಪುರದ ಮನೆಯಲ್ಲಿ ಭವಾನಿ ರೇವಣ್ಣ ಇರಲಿಲ್ಲ.
ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ
Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

