Saturday, July 27, 2024

Latest Posts

Prajwal Pen drive Case: ಕೊನೆಗೂ ಪ್ರತ್ಯಕ್ಷರಾದ ಪ್ರಜ್ವಲ್ ರೇವಣ್ಣ

- Advertisement -

Political News: ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ, ಇದೀಗ ವೀಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ.

ನಾನು ವಿದೇಶದಲ್ಲಿ ಎಲ್ಲಿದ್ದೇನೆ ಅಂತಾ ಹೇಳದಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಭವಾನಿ ಮತ್ತು ರೇವಣ್ಣ ಅವರಲ್ಲಿ ಪ್ರಜ್ವಲ್ ಕ್ಷಮೆ ಕೇಳಿದ್ದಾರೆ. ವಿದೇಶಕ್ಕೆ ಹೋಗಿ ಒಂದು ತಿಂಗಳ ಬಳಿಕ ವೀಡಿಯೋ ಮಾಡಿರುವ ಪ್ರಜ್ವಲ್, ಚುನಾವಣೆಗೂ ಮುನ್ನವೇ, ತಾನು ಚುನಾವಣೆ ಬಳಿಕ ವಿದೇಶಕ್ಕೆ ಹೋಗುವುದು ನಿರ್ಧಾರವಾಗಿತ್ತು. ಹಾಗಾಗಿ ನಾನು ವಿದೇಶಕ್ಕೆ ಬಂದಿದ್ದೇನೆ. ಆದರೆ ನಾನು ಪ್ರಕರಣ ಬೆಳಕಿಗೆ ಬಂದಿದ್ದಕ್ಕೆ, ವಿದೇಶಕ್ಕೆ ಬಂದು ತಲೆ ಮರೆಸಿಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಮೇ 31ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್.ಐ.ಟಿ ಮುಂದೆ ಹಾಜರಾಗ್ತೇನೆ. ನಾನು ಪೂರ್ವ ನಿರ್ಧಾರದಂತೆ ವಿದೇಶ ಪ್ರವಾಸ. ನನ್ನ ಮೇಲೆ ಷಡ್ಯಂತ್ರ ರೂಪಿಸಲಾಗಿದೆ. ನಾನು ವಿದೇಶಕ್ಕೆ ತೆರಳಿದ ಮೇಲೆ ಎಸ್.ಐ.ಟಿ ರಚನೆ ಮಾಡಲಾಗಿದೆ. ಈ ನ್ಯೂಸ್ ನೋಡಿದಮೇಲೆ ನಾನು ಡಿಪ್ರೆಶನ್ ಗೆ ಹೋಗಿದ್ದೆ. ಕಾಂಗ್ರೆಸ್ ನಾಯಕರ ಆರೋಪದಿಂದ ಡಿಪ್ರೆಶನ್ ಹೋಗಿದ್ದೆ.ನಾನು ಐಸೋಲೇಷನ್ ಗೆ ಒಳಗಾಗಿದ್ದೆ. ನಾನು ವಾಪಸ್ ಬರ್ತೇನೆ ವಿಚಾರಣೆಗೆ ಹಾಜರಾಗ್ತೇನೆ. ಹಾಸನದಲ್ಲಿ ನನ್ನ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ  ಎಂದು ಪ್ರಜ್ವಲ್ ಆರೋಪಿಸಿದ್ದಾರೆ. ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡ್ತೇನೆ ಅಂತಾ ಪ್ರಜ್ವಲೇ ರೇವಣ್ಣ ಹೇಳಿದ್ದಾರೆ.

ಅಂಜಲಿ ಹಂತಕ ಗಿರೀಶ್‌ಗೆ ಕಠಿಣ ಶಿಕ್ಷೆಯಾಗಬೇಕು: ವಿಚಾರಣೆ ಬಳಿಕ ಸಂತ್ರಸ್ತೆ ಹೇಳಿಕೆ

ಅಂಜಲಿ ಕೇಸ್ ಆರೋಪಿ ಗಿರೀಶ್‌ಗೆ ಸಿಐಡಿ ಡ್ರಿಲ್: ಸಂತ್ರಸ್ತತ ಮಹಿಳೆಯನ್ನು ಕರೆಸಿ ವಿಚಾರಣೆ

ಇನ್ನು ಮುಂದೆ ಅಯೋಧ್ಯಾ ರಾಮಮಂದಿರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ

- Advertisement -

Latest Posts

Don't Miss