Hassan News: ಹಾಸನ : ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಸಿ, ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರಜ್ವಲ್‌ರೇವಣ್ಣ ಅವರೇ ಅಭ್ಯರ್ಥಿ ಎಂದು ಖಚಿತಪಡಿಸಿದ್ದಾರೆ.
ನನ್ನ ರೇವಣ್ಣ ಅವರಲ್ಲಿ ಭಿನ್ನಾಭಿಪ್ರಾಯ ಇದ್ದವು. ನಾನು ಕುಟುಂಬ ಒಡೆಯಲು ಬಿಡಲಿಲ್ಲ. ಕಠಿಣ ನಿರ್ಧಾರ ಮಾಡಿ ಸ್ವರೂಪ್‌ಗೆ ಟಿಕೆಟ್ ಕೊಟ್ಟೆ. ರೇವಣ್ಣ ಅವರ ಅಭಿವೃದ್ಧಿ ಕೆಲಸದ ಮುಂದೆ ನಾನು ಇಲ್ಲ. ಆದರೆ ಸ್ವಲ್ಪ ಮುಂಗೋಪ ಬೈಯ್ತಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಅವನನ್ನು ಕ್ಷಮಿಸಿಬಿಡಿ. ನಮ್ಮಲ್ಲಿ ತಪ್ಪುಗಳಾಗಿರಬಹುದು ಆದರೆ ತಿದ್ದುಕೊಳ್ಳಲು ಅವಕಾಶ ಕೊಡಿ. ಜನರು ಕ್ಷಮಿಸುತ್ತಾರೆ ಅದರಲ್ಲಿ ನಂಬಿಕೆ ಇದೆ. ಈ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ, ದಯವಿಟ್ಟು ಪಕ್ಷ ಉಳಿಸಿಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ದೇವೇಗೌಡರು ನರೇಂದ್ರಮೋದಿಯವರ ಮನೆಗೆ ಹೋದರೆ, ಎದ್ದು ಬಂದು ಕೈಹಿಡಿದು ಕರೆದುಕಂಡು ಹೋಗಿ ಕೂರಿಸಿ ಮಾತಾಡ್ತಾರೆ. ಇವತ್ತು ಪ್ರಜ್ವಲ್‌ರೇವಣ್ಣ ಅವರಲ್ಲ ಈ ಜಿಲ್ಲೆಯ ಅಭ್ಯರ್ಥಿ. ಈ ಜಿಲ್ಲೆಗೆ ಕಿಂಚಿತ್ತು ನಾನು ಸೇವೆ ಮಾಡಿದ್ದೇನೆ. ಇವತ್ತು ಪ್ರಜ್ವಲ್ ಅಲ್ಲಾ ಅಭ್ಯರ್ಥಿ ಈ ಕುಮಾರಸ್ವಾಮಿ. ನನ್ನಲ್ಲಿ ಪ್ರಜ್ವಲ್‌ರೇವಣ್ಣ ಅವರನ್ನು ಕಾಣಿ. ಈ ಚುನಾವಣೆ ನಮ್ಮ ಪಕ್ಷಕ್ಕೆ ಸತ್ವ ಪರೀಕ್ಷೆ. ನಾವು ಮೂರು ಕಡೆ ನಿಲ್ತೇವೆ. ಹಾಸನ, ಮಂಡ್ಯ, ಕೋಲಾರದಲ್ಲಿ ನಿಲ್ತೇವೆ. ಇನ್ನೇರಡು ಮೂರು ಕ್ಷೇತ್ರ ಕೇಳಿದ್ರೆ ಕೋಡೋರು.ದಯವಿಟ್ಟು ನಮ್ಮನ್ನು ಕೈಬಿಡಬೇಡಿ, ದಯವಿಟ್ಟು ಈ ಪಕ್ಷ ಉಳಿಸಿಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ನಾನು ಅಷ್ಟು ಬೇಗ ಸಾಯಲ್ಲ ದೇವರು ಶಕ್ತಿ ಕೊಡ್ತಾನೆ. ಈ ದೇಹ ಮಣ್ಣಿಗೆ ಹೋಗುವವರಿಗೂ ಯಾವುದೇ ಜಾತಿ ನೋಡದೆ ಜನರ ಸೇವೆ ಮಾಡ್ತಿನಿ. ನಾನು ಇನ್ನೊಂದು ವಾರದಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ. ನಾನು ಆಸ್ತಿ ಸಂಪಾದನೆ ಮಾಡಿಲ್ಲ. ನಿಮ್ಮಂತಹ ಲಕ್ಷಾಂತರ ಜನರನ್ನು ಸಂಪಾದಿಸಿದ್ದೇನೆ. ಇವನು ರೇವಣ್ಣನ ಮಗ ಅಲ್ಲಾ ನನ್ನ ಮಗ. ಬಹಳಷ್ಟು ಬದಲಾವಣೆ ತರ್ತಿನಿ, ಅವನೂ ಬದಲಾಗುತ್ತಾನೆ. ಎಲ್ಲಾ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಈ ಬಾರಿ ಚುನಾವಣೆಗೆ ನಾನು ನಿಲ್ತಿಲ್ಲಾ. ಮಂಡ್ಯದಲ್ಲಿ ಅರ್ಜಿ ಹಾಕಿ ಹೋಗು ಅಂತಾರೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರಿನಲ್ಲಿ ನಿಲ್ಲಿ ಅಂತಾರೆ. ತೆಗಿರಿ ಪೇಪರ್ ಯಾರ‌್ಯಾರ ಕುಟುಂಬದವರು ಎಷ್ಟೆಷ್ಟು ಜನ ರಾಜಕೀಯದಲ್ಲಿದ್ದಾರೆ. ದೇವೇಗೌಡರ ಕುಟುಂಬದ ಬಗ್ಗೆ ಮಾತ್ರ ಚರ್ಚೆ ಆಗುತ್ತೆ.
ಡಾ.ಮಂಜುನಾಥ್ ಅಭ್ಯರ್ಥಿ ಮಾಡಲು ತೀರ್ಮಾನ ಮಾಡಿರಲಿಲ್ಲ. ಹದಿನೇಳು ವರ್ಷ ಅವರ ಸೇವೆ ನೋಡಿ ಅವರೇ ಅಭ್ಯರ್ಥಿ ಆಗಬೇಕು ಅಂತ ಮಾಧ್ಯಮದವರೇ ಶುರು ಮಾಡಿದ್ರು. ಮಾಧ್ಯಮಗಳಲ್ಲೇ ಡಾ.ಮಂಜುನಾಥ್ ರಾಜಕೀಯಕ್ಕೆ ಬರಬೇಕು ಎಂದು ಪ್ರಚಾರ ಮಾಡಿದ್ರು. ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಗೂ ಆ ರೀತಿಯ ಪ್ರಚಾರ ಕೊಡಲಿಲ್ಲ. ಡಾ.ಮಂಜುನಾಥ್ ಈ ಜಿಲ್ಲೆಯ ಮಣ್ಣಿನ ಮಗ. ಬಿಜೆಪಿ ಹೈಕಮಾಂಡ್ ನಿಮ್ಮ ಭಾವ ಅವರನ್ನು ಒಪ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ.ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕನಕಪುರದಿಂದ ಬಂದು ಇಲ್ಲಿ ಜೆಡಿಎಸ್ ಸೋಲಿಸುತ್ತೀನಿ ಅಂತಾರೆ. ಡಿಸಿಎಂ ಇಲ್ಲಿ ಬಂದು ಹಾಸನದಲ್ಲಿ ಕೂಗಿದ್ರೆ ಹೊಳೆನರಸೀಪುರಕ್ಕೆ ಕೇಳಬೇಕು ಎಂದು ಹೇಳ್ತಾರೆ. ರಾಜಕೀಯದಲ್ಲಿ ಸೋಲು, ಗೆಲುವು ಸಹಜ. ನಾವು ಗೆದ್ದಾಗ ದುರಂಹಕಾರ ಮಾಡಿಲ್ಲ, ಸೋತಾಗ ಕುಗ್ಗಿಲ್ಲ. ಇಲ್ಲಿ ಕೂಗಿದ್ರೆ ಕನಕಪುರಕ್ಕೆ ಕೇಳಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

