Sunday, April 13, 2025

Latest Posts

‘ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ’

- Advertisement -

ಹಾಸನ: ಹಾಸನದಲ್ಲಿಂದು ಜೆಡಿಎಸ್ ಸಭೆ ನಡೆದಿದ್ದು, ಈ ವೇಳೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಪ್ರೀತಂಗೌಡ ವಿರುದ್ಧ ಹರಿಹಾಯ್ದಿದ್ದಾರೆ.

ರೇವಣ್ಣ ಫ್ಯಾಮಿಲಿ ಪ್ರಚಾರಕ್ಕೆ ಬರ್ತಾರೋ ಇಲ್ವೋ ಅಂತಾ ಅನುಮಾನ ಇತ್ತು. ಟಿಕೆಟ್ ಹಾಗೂ ಪ್ರಯತ್ನ ಮಾಡಿದ್ದು ನಿಜ.  ಟಿಕೆಟ್ ಘೋಷಣೆಯಾದ ಬಳಿಕ ರೇವಣ್ಣ ಫ್ಯಾಮಿಲಿ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಾಗಿರುತ್ತೇವೆ. ನಾವು ಬಹಳ ಸಮಯವನ್ನು ಹಾಳು‌ಮಾಡಿಕೊಂಡಿದ್ದೇವೆ. ಈ ಕೆಲಸನ್ನು ಮೊದಲೇ ಮಾಡಬೇಕಿತ್ತು.  ಹೊಳೆನರಸೀಪುರ ಹಾಗೂ ಹೇಮಾವತಿ ನಗರಕ್ಕೆ ಅಂತಾ ಚಾಲೆಂಜ್ ಹಾಕ್ತಾರೆ. ಹೊಳೆನರಸೀಪುರ ಹಾಗೂ ಹೇಮಾವತಿ ನಗರ ಒಂದಾದ್ರೆ ನಿಮ್ಮ‌ ಹವಾ ಏನಾಗುತ್ತೆ ನೋಡಿ . ಇಷ್ಟು ದಿನ ನಿಮ್ಮ ಹವಾ, ನಾಳೆಯಿಂದ ನಮ್ಮ ಹವಾ ಎಂದು ಪ್ರಜ್ವಲ್ ಪ್ರೀತಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಸ್ವಾಭಿಮಾನಕ್ಕೆ ಕೊರತೆಯಿಲ್ಲ. ಮೇ 13 ಕ್ಕೆ ಫಲಿತಾಂಶ ಬರ್ತಾ ಇದೆ.  ಆ ಫಲಿತಾಂಶದಲ್ಲಿ ಹಾಸನ ಕ್ಷೇತ್ರದ್ದೆ ಮೊದಲ ಫಲಿತಾಂಶ ಪ್ರಕಟವಾಗಲಿದೆ. ಅದರಲ್ಲಿ ಸ್ವರೂಪ್ ಅವರೇ ಗೆಲ್ಲುತ್ತಾರೆ. ಭವಾನಿ ಅಕ್ಕ ಹಾಗೂ ಸ್ವರೂಪ್ ಅವರ ಇಬ್ಬರ ಬೆಂಬಲಿಗರಿಗೂ ಹೇಳೋದಕ್ಕೆ ಬಯಸುತ್ತೇನೆ. ನಾವು ಮೇಲೆ ನಾವು ಮೇಲು ಅಂತಾ ಬರೋದು ಬೇಡ. ಇಬ್ಬರೂ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು. ಎಲ್ಲಿಂದಲೋ ಕರ್ಕೊಂಡ್ ಜನ ತೋರಿಸೋದಲ್ಲ. ನಾಳೆ ನಾವ್ ತೋರಿಸ್ತೇವೆ, ಪಕ್ಕದ ಜಿಲ್ಲೆಯಿಂದ ಅಲ್ಲ, ಪಕ್ಕದ ತಾಲೂಕಿನಿಂದ ಅಲ್ಲ. ಇದೇ ಕ್ಷೇತ್ರದ ಜನರು ಬರ್ತಾರೆ ನೋಡಿ. ನಾವು ದಡ್ಡು ಕೊಟ್ಟ‌ು ಕರ್ಕೊಂಡ್ ಬರೋದಿಲ್ಲ, ಪ್ರೀತಿಯಿಂದ ಬರ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

‘ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸುತ್ತಾರೆ’

ಸಾವಿರಾರು ಕಾರ್ಯಕರ್ತರ ಬೆಂಬಲದೊಂದಿಗೆ ಶಾಸಕ ಎಲ್‌.ಎನ್‌ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ

ಶೆಟ್ಟರ್ ಧ್ವಜ ಬದಲಿಸಿದರೆ ವಿಚಾರಧಾರೆ ಬದಲಾದೀತೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನೆ..

- Advertisement -

Latest Posts

Don't Miss