ಹಾಸನ: ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಏಕವಚನದಲ್ಲಿ ನಿಂದನೆ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಶ್ವನಾಥ್ ವಿರುದ್ಧ ಸಂಸದ ಪ್ರಜ್ವಲ್ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಮಾತನಾಡಿದ ಪ್ರಜ್ವಲ್, ಒಬ್ಬ ಜನಪ್ರತಿನಿಧಿಗೆ ಗೌರವ ಕೊಡಲಿಲ್ಲ ಅಂದರೆ ಯಾವುದೇ ಸಭೆಗೆ ಬರಲು ಅವರು ಲಾಯಕ್ ಇಲ್ಲ. ನಾನು ಒಳ್ಳೆಯತನದಲ್ಲಿ ಅವರಿಗೆ ಒಂದು ಮಾತು ಹೇಳುತ್ತೇನೆ. ಕಾಡಾನೆಗಳ ಸಮಸ್ಯೆ ಇರುವುದು ನಿಜ, ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ ಪಕ್ಷ, ರಾಜಕೀಯ ಬೆರೆಸುವುದಕ್ಕೆ ನಾಚಿಕೆ ಆಗಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಕಾಂತರಾ ಸಿನಿಮಾ ಮತ್ತೆ ಕೋರ್ಟ್ ನಲ್ಲಿ..!
ಪಕ್ಷಾತೀತವಾಗಿ ಹೋರಾಟ ಮಾಡೋಣ ಅಂದಿದ್ದೀನಿ, ಇದು ದೊಡ್ಡಗುಣ. ಚಿಕ್ಕವರಿಂದ ಏನನ್ನು ಕಲಿಯುವುದಿಲ್ಲ, ದೊಡ್ಡವರಿಂದ ಬಹಳಷ್ಟು ಕಲಿತಿದ್ದೀವಿ. ದೇವಗೌಡರ ಮಾರ್ಗದರ್ಶನದಲ್ಲಿ ನಡಿತಿವಿ. ನಾವು ಎಲ್ಲಾ ಪಕ್ಷದವರಿಗೂ ಗೌರವ ಕೊಡ್ತಿವಿ, ಹೋರಾಟಕ್ಕೆ ಅವರು ಬಂದರೆ ಖುಷಿ. ಎಲ್ಲರೂ ವೇದಿಕೆಗೆ ಹೋದಾಗ ಬಾಯನ್ನು ಹದ್ದುಬಸ್ತ್‌ಲಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇದನ್ನು ಮಾಡಬೇಕು ಎಂದು ಕಿವಿಮಾತು ಹೇಳುತ್ತೇನೆ. ಇವತ್ತು ಅವರು ಯಾವ ಪಕ್ಷದಲ್ಲಿ ಇದ್ದಾರೆ. ಅವರು ಯಾವ ಪಕ್ಷದಲ್ಲಿ ಇದ್ದಾರೆ ಎನ್ನೋದೆ ಜನರನ್ನು ಕಾಡುತ್ತಿದೆ. ನನ್ನ ಪ್ರಕಾರ ಬಿಜೆಪಿಯಲ್ಲಿ ಇದ್ದಾರೆ ಅನ್ಕಂಡಿದಿನಿ ಎಂದು ಪ್ರಜ್ವಲ್ ಹೇಳಿದ್ದಾರೆ.
ಅಲ್ಲದೇ, ಎಂಎಲ್‌ಸಿ ಚುನಾವಣೆಗೆ ನಿಂತಿದ್ದು, ಆಮೇಲೆ ಬೇಜಾರ್ ಆಗಿ ಎಲ್ಲಾದ್ರು ಹೋಗಿದ್ರೆ ಗೊತ್ತಿಲ್ಲ. ಅವರಿಗೆ ಆಮ್ ಆದ್ಮಿ ಒಂದು ಖಾಲಿಯಿದೆ, ಅವಕಾಶವಿದೆ. ಅವರೇನಾದ್ರು ನ್ಯಾಯಬದ್ಧವಾಗಿ ಬಿಜೆಪಿಯಲ್ಲಿ ಇದ್ದರೆ, ರಾಜ್ಯ, ಕೇಂದ್ರದಲ್ಲೂ ಅವರದ್ದೇ ಸರ್ಕಾರ ಇದೆ. ಇಲ್ಲಿ ಬಂದು ಭಾಷಣದಲ್ಲಿ ತಾಕತ್ ತೋರ್ಸೋದಲ್ಲ. ಕೇಂದ್ರ, ರಾಜ್ಯ ಸರ್ಕಾರದ ಬಳಿ ಹೋಗಿ ಹೋರಾಟ ಮಾಡಲಿ. ಅವರದ್ದೇ ಸರ್ಕಾರ ಇಟ್ಕಂಡು ಹೋರಾಟ ಯಾರ ಮೇಲೆ ಮಾಡ್ತರ್ವೆ ಅಂತನು ಗೊತ್ತಿಲ್ಲ. ಅವರದ್ದೇ ಸರ್ಕಾರ ಇಟ್ಕಂಡು ಅವರ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ರೆ ನಾನು ಏನ್ ಹೇಳ್ಲಿ ಎಂದು ಪ್ರಜ್ವಲ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಅವರು ಹಿರಿಯರಿದ್ದಾರೆ, ದಯವಿಟ್ಟು ಇಂತಹದ್ದನ್ನಲ್ಲು ತಿದ್ದಿಕೊಳ್ಳಬೇಕು. ಇನ್ಮೇಲಾದ್ರು ಚಿಕ್ಕವಯಸ್ಸಿನವರ ತರ ಆಡದು ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ. ಅವರು ಮಾಜಿಶಾಸಕರು ಜವಾಬ್ದಾರಿಯಿಂದ ಮಾತನಾಡಲಿ. ನೀನು ಕರಿ ನಮ್ಮನ್ನು ಹೋರಾಟಕ್ಕೆ ಬರುತ್ತೇನೆ. ವಿಶ್ವನಾಥ್ ಅಣ್ಣ ಅವರು ಕರೆದಿದ್ದಾರೆ ಅಂತ ನಾವು ಬರ್ತಿವಿ ಎಂದು ಪ್ರಜ್ವಲ್ ಹೇಳಿದ್ದಾರೆ.