Hassan News: ಹಾಸನ : ಇಂದು ಮಾನ್ಯ ಸಂಸದರಾದ ಪ್ರಜ್ವಲ್ ರೇವಣ್ಣ ರವರು ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಇದ್ದಾರೆ ಎಂಬ ಹೇಳಿಕೆ ಹಾಸ್ಯಸ್ಪದ ಹಾಗೂ ಖಂಡನೀಯ ಎಂದು ಹಾಸನ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ವೇಣುಗೋಪಾಲ್, ಭಾರತೀಯ ಜನತಾ ಪಾರ್ಟಿ ಹಾಸನ ಜಿಲ್ಲೆಯಲ್ಲಿ ಮಾನ್ಯ ಪ್ರೀತಮ್ ಗೌಡ, ಶಾಸಕರಾದ ಸಿಮೆಂಟ್ ಮಂಜು ಶಾಸಕರಾದ ಸುರೇಶ್ ಹಾಗೂ ಜಿಲ್ಲಾಧ್ಯಕ್ಷರ ಮುಂದಾಳತ್ವದಲ್ಲಿ ಸದೃಢವಾಗಿ ಬೆಳೆದಿದ್ದು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅವಕಾಶ ನೀಡಿದಲ್ಲಿ ಗೆಲುವು ನಮ್ಮದೇ ಎಂಬ ವಿಶ್ವಾಸ ನಮ್ಮ ಕಾರ್ಯಕರ್ತರಲ್ಲಿದೆ ಈ ವಿಷಯವಾಗಿ ಕೇಂದ್ರದಿಂದ ಬಂದಂತಹ ನಾಯಕರಿಗೆ ಹಾಗೂ ರಾಜ್ಯದ ನಾಯಕರಿಗೆ ನಮ್ಮ ಹಾಸನ ಜಿಲ್ಲೆಯ ಕಾರ್ಯಕರ್ತರು ಅನೇಕ ಬಾರಿ ಮನವಿ ಮಾಡಿದ್ದಾರೆ ಮತ್ತು ಆ ವಿಶ್ವಾಸವನ್ನು ಸಹ ಅವರಿಗೆ ನೀಡಲಾಗಿದೆ ಎಂದಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮೈತ್ರಿ ಯ ವಿಚಾರ ಕಾರ್ಯ ಕರ್ತರ ಮಟ್ಟಿಗೆ ಇನ್ನೂ ಖಚಿತಗೊಂಡಿಲ್ಲ ನಮಗೆ ರಾಜ್ಯದ ಅಥವಾ ಜಿಲ್ಲೆಯ ಯಾವ ನಾಯಕರು ಸಹ ಮೈತ್ರಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ ಒಂದೊಮ್ಮೆ ನಾವು ಮೈತ್ರಿ ಯಾದಲ್ಲಿ ನಮ್ಮ ಬಿಜೆಪಿ ನಾಯಕರುಗಳ ಮುಂದಾಳತ್ವದಲ್ಲಿ ನಾವು ಬಿಜೆಪಿ ಹಾಗು ನರೇಂದ್ರ ಮೋದಿಯವರನ್ನು ಗೆಲ್ಲಿಸುವುದಕ್ಕೆ ಮತವನ್ನು ಕೇಳುತ್ತೇವೆ ಹೊರತು ನಾವು ನೇರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜೊತೆ ಹೋಗುವುದಿಲ್ಲ. ಪಕ್ಷದ ಬಹುತೇಕ ಮಂದಿ ನಮ್ಮ ಈ ವಿಚಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ವೇಣುಗೋಪಾಲ್ ಜೊತೆ ನಮ್ಮ ಗ್ರಾಮಾಂತರ ಮಂಡಲದ ಪ್ರಮುಖರಾದ ಬೀರನಹಳ್ಳಿ ಮಂಜು ಉಪಸ್ಥಿತರಿದ್ದರು.
ನಾಯಿ ತಿನ್ನದ ಬಿಸ್ಕೀಟನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ
ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?
ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ