ಆಟವಾಡಲು ಹೋದ ಮಕ್ಕಳು ಜಲಸಮಾಧಿ!

ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ನಿರ್ಮಾಣ ಕಾರ್ಯಕ್ಕಾಗಿ ತೋಡಲಾಗಿದ್ದ ನೀರಿನ ಗುಂಡಿಯಲ್ಲಿ ಬಿದ್ದು ಇಬ್ಬರು 7 ವರ್ಷದ ಬಾಲಕರು ಸಾವನ್ನಪ್ಪಿದ ದುರಂತ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಕುಮಾರ್ ನಿಂಗಪ್ಪ ಮುದಕಣ್ಣವರ (7) ಹಾಗೂ ಪ್ರಥಮ್ ಉಳ್ಳಾಗಡ್ಡಿ (7) ಎಂದು ಗುರುತಿಸಲಾಗಿದೆ. ಪ್ರಥಮ್ ಧಾರವಾಡದ ಸತ್ತೂರು ನಿವಾಸಿಯಾಗಿದ್ದು, ರಜೆಗೆಂದು ಮಾವನ ಮನೆಗೆ ಬಂದಿದ್ದಾನೆ ಎನ್ನಲಾಗಿದೆ.

ಮಾಹಿತಿಯಂತೆ, ಇಬ್ಬರು ಬಾಲಕರು ಬುಧವಾರ ಸಂಜೆ ಆಟವಾಡಲು ಹೊರಟಿದ್ದರು. ಆದರೆ ರಾತ್ರಿ ಆದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಬಳಿಕ ಗ್ರಾಮದ ಹೊರವಲಯದಲ್ಲಿ ಮನೆ ನಿರ್ಮಾಣಕ್ಕಾಗಿ ತೋಡಲಾಗಿದ್ದ ನೀರಿನ ಗುಂಡಿಯಲ್ಲಿ ಇಬ್ಬರು ಮಕ್ಕಳು ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಸ್ಥಳೀಯರು ಮಕ್ಕಳನ್ನು ಹೊರತೆಗೆದರೂ, ಅಷ್ಟರಲ್ಲೇ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಘಟನೆಯು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

About The Author