ಮೈಸೂರು: ಮೈಸೂರಿನಲ್ಲಿಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗ್ತಿದೆ. ಮೈಸೂರಿನಲ್ಲಿ ಉಗ್ರರು ಸ್ವೇಚ್ಚೆಯಿಂದ ಓಡಾಡುವಂತಾಗಿದೆ. ಉಗ್ರರ ಈ ಬಗೆಯ ಚಟುವಟಿಕೆ ವ್ಯಾಪಕವಾಗ್ತಿದೆ. ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಘಟಕ ಸ್ಥಾಪಿಸಬೇಕು ಎಂದು ಹೇಳಿದ್ದಾರೆ.
ಎನ್.ಆರ್. ಕ್ಷೇತ್ರದಲ್ಲಿ ಕೂಂಬಿಂಗ್ ಆಪರೇಷನ್ ಆಗಬೇಕೆಂಬ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಪ್ರತಾಪಸಿಂಹ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಮಂಗಳೂರು ಬಾಂಬ್ ಬ್ಲಾಸ್ಟ್ ಮಾಡಿದ ಶಾರಿಕ್ ಹಿಂದೂ ವೇಷ ಧರಿಸಿದ ವಿಚಾರದ ಬಗ್ಗೆ ಮಾತನಾಡಿದ ಮುತಾಲಿಕ್, ಉಗ್ರಗಾಮಿಗಳು ತಾವು ಮಾಡುವ ಕೃತ್ಯಗಳನ್ನ ಹಿಂದೂಗಳ ಮೇಲೆ ಹಾಕಲು ಈ ಕುತಂತ್ರ. ಹಿಂದೂಗಳು ಯಾವತ್ತೂ ಭಯೋತ್ಪಾದನಾ ಚಟುವಟಿಕೆ ಮಾಡಲ್ಲ. ಭಾರತದಲ್ಲಿ ಮಾತ್ರ ಅಲ್ಲ,ಇಡೀ ವಿಶ್ವದಲ್ಲೇ ಜಗಜ್ಜಾಹೀರಾಗಿರೋದು ಇಸ್ಲಾಂ ಭಯೋತ್ಪಾದನೆ ಮಾತ್ರ. ಹಾಗಾಗಿ ಇಸ್ಲಾಮಿಕ್ ಭಯೋತ್ಪಾದನೆ ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.
‘ಡವ್ ಮಾಸ್ಟರ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ
ಹಿಂದೂ ಬಾಹುಳ್ಯ ಪ್ರದೇಶದಲ್ಲಿ ಯಾವ ಗೊಂದಲ, ಸಮಸ್ಯೆಗಳು ಇರಲ್ಲ. ಮುಸ್ಲಿಂ ಬಾಹುಳ್ಯ ಪ್ರದೇಶವನ್ನ ಸೂಕ್ಣ್ಮ ಪ್ರದೇಶ ಅನ್ನೋದು. ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂದ್ರೆ ಅಲ್ಲಿ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿವೆ ಎಂದರ್ಥ. ಅದೇ ಕಾರಣಕ್ಕೆ ಮುಸ್ಲೀಮರು ಅತೀ ಹೆಚ್ಚಿರೋ ಪ್ರದೇಶನವನ್ನು ಸೂಕ್ಷ್ಮ ಪ್ರದೇಶ ಅಂತಾರೆ ಎಂದು ಮೈಸೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಅಲ್ಲದೇ, ಲವ್ ಜಿಹಾದ್ ನಿಯಂತ್ರಣಕ್ಕೆ ಪ್ರತ್ಯೇಕ ಕಾಯಿದೆ ರೂಪಿಸಬೇಕು. ಬಿಜೆಪಿ ಸರಕಾರದ ಮುಖ್ಯಮಂತ್ರಿಗೆ ವಿಶೇಷವಾಗಿ ಮನವಿ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಲವ್ ಜಿಹಾದ್ ದಿನೇ ದಿನೇ ಹೆಚ್ಚಾಗ್ತಿದೆ. ಲವ್ ಜಿಹಾದ್ ವಿರುದ್ದ ಮೊದಲು ದ್ವನಿ ಎತ್ತಿದವನೇ ನಾನು. 3 ಸಾವಿರ ಹೆಣ್ಣು ಮಕ್ಕಳನ್ನ ಲವ್ ಜಿಹಾದ್ ನಿಂದ ನಾವು ಪಾರು ಮಾಡಿದ್ದೇವೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣ
ಅಲ್ಲದೇ, ಹಿಂದೂ ಹೆಣ್ಣು ಮಕ್ಕಳು ಪ್ರೀತಿ ಮಾಡಬೇಕಾದರೆ ಅಬ್ದುಲ್ಲಾ-ಅಶೋಕ್ ವ್ಯತ್ಯಾಸ ಅರಿತು ಪ್ರೀತಿ ಮಾಡಬೇಕು. ಇಲ್ಲವಾದರೆ ದೆಹಲಿಯಲ್ಲಿ ನಡೆದಂತೆ ಹಿಂದೂ ಹೆಣ್ಣು ಮಕ್ಕಳು ತುಂಡು ತುಂಡಾಗಿ ಬಲಿಯಾಗುತ್ತಾರೆ .ನಿಮ್ಮ ಜತೆಗೆ ಹಿಂದೂ ಧರ್ಮವನ್ನೂ ಬಲಿ ಕೊಡಬೇಡಿ. ಲವ್ ಜಿಹಾದ್ ನಿಯಂತ್ರಣವಾಗಬೇಕಾದರೆ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಮುತಾಲಿಕ್ ಆಗ್ರಿಹಿಸಿದ್ದಾರೆ.
ನಾನು ಎಂದೂ ಬಿಜೆಪಿ ಪರವಾಗಿ ಮಾತನಾಡಿಲ್ಲ. ಬಿಜೆಪಿ ಪರವಾಗಿ ಸಾಫ್ಟ್ ಕರ್ನರ್ ತೋರಿಲ್ಲ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬೈದವನು ನಾನು. ಬಿಜೆಪಿಯನ್ನ ಮೊದಲಿನಿಂದಲೂ ಟೀಕಿಸುತ್ತಾ ಬಂದಿದ್ದೇನೆ. ಕೇವಲ ಹಿಂದುತ್ವದ ವಿಚಾರವಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದೀನಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.