- Advertisement -
ಮೈಸೂರು: ಇವತ್ತಿನ ವಿಧಾನಸಭೆ ಚುನಾವಣೆಗೆ ಮತದಾರರು ಖುಷಿಯಿಂದ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಕೆಲವೆಡೆ ಮತ ಚಲಾಯಿಸುವಾಗ ಕೆಲ ಎಡವಟ್ಟು, ತಪ್ಪಾಗುವುದು ಸಹಜ. ಅದೇ ರೀತಿ ಪ್ರಮೋದಾದೇವಿ ಮತಚಲಾಸುವ ಖುಷಿಯಲ್ಲಿ, ಬೇಕಾದ ದಾಖಲೆ ತರುವುದನ್ನೇ ಮರೆತಿದ್ದಾರೆ. ಹಾಗಾಗಿ ವೋಟ್ ಮಾಡಲು ಬಂದ ರಾಜಮಾತೆ, ವಾಪನ್ ಅರಮನೆಗೆ ಹೋಗಿ, ತಮ್ಮ ವೋಟರ್ ಐಡಿ ತಂದು ವೋಟ್ ಮಾಡಿದ್ದಾರೆ.
ಮತಗಟ್ಟೆಗೆ ಬಂದ ರಾಜಮಾತೆ, ದಾಖಲೆ ತರುವುದನ್ನ ಮರೆತಿದ್ದು, ಮೊಬೈಲ್‌ನಲ್ಲಿದ್ದ ಸಾಫ್ಟ್‌ಕಾಪಿ ತೋರಿಸಿದ್ದಾರೆ. ಆದರೆ ಅದರಿಂದ ಪ್ರಯೋಜನವಿಲ್ಲ, ನಿಜವಾದ ದಾಖಲಾತಿಯನ್ನೇ ತರಬೇಕೆಂದು ಅಧಿಕಾರಿಗಳು ಹೇಳಿದ್ದಾರೆ. ನಂತರ ಪ್ರಮೋದಾದೇವಿ ಅರಮನೆಗೆ ಹೋಗಿ, ಎಲ್ಲಾ ಡಾಕ್ಯೂಮೆಂಟ್ಸ್ ತಂದು ವೋಟ್ ಮಾಡಿದ್ದಾರೆ.
‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’
- Advertisement -