ಈ ಶುಕ್ರವಾರ ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆದ್ರೂ ರೋಮ್ಯಾಂಟಿಕ್ ಲವ್‌ಸ್ಟೋರಿ ಪ್ರಾರಂಭ ಸ್ವಲ್ಪ ಹೆಚ್ಚೇ ಕುತೂಹಲ ಮೂಡಿಸಿತ್ತು. ಅದಕ್ಕೆ ಕಾರಣ ಮನೋರಂಜನ್ ರವಿಚಂದ್ರನ್. ಕ್ರೇಜಿಸ್ಟಾರ್ ಪುತ್ರನ ಸಿನಿಮಾವನ್ನು ಡೈರೆಕ್ಟ್ ಮಾಡಿರೋದು ಮನು ಕಲ್ಯಾಡಿ. ನಿರ್ಮಾಣ ಮಾಡಿರೋದು ಜಗದೀಶ್ ಕಲ್ಯಾಡಿ. ಕಂಪ್ಲೀಟ್ ಹೊಸಬರ ತಂಡದ ಪ್ರಯತ್ನ ಹೊಸ ತರದಲ್ಲಿದೆ.
ಮೊದಲೇ ಅನಾಥ. ಪ್ರೀತಿ ಮಾಡ್ತಾನೆ. ಪ್ರೀತಿ ಸಿಕ್ಕುತ್ತೆ ಆದ್ರೆ ಹಂಗೇ ಕಳೆದು ಹೋಗುತ್ತೆ. ಪ್ರೀತಿ ಕಳೆದುಕೊಂಡು ಪ್ಯಾಥೋ ಮೂಡ್‌ನಲ್ಲಿರೋ ಮಂಥನ್ ತನ್ನ ಪ್ರೀತಿಯ ನಾಯಿ ಶ್ಯಾಡೋ ಜೊತೆ ಪದೇ ಪದೇ ಮಧ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕರ ಅನ್ನೋ ಸಂದೇಶ ಕೊಡ್ತಾನೆ ರ‍್ತಾನೆ. ಹೀಗಿರೋ ಮಂಥನ್‌ನ ಮನಸ್ಸಿನ ಮಂಥನಕ್ಕೆ ಅಂತ ರಿಹ್ಯಾಬಿಲಿಟೇಷನ್ ಸೆಂಟರ್ ಸರ‍್ಕೋಳ್ಳೋ ಹಂಗಾಗುತ್ತೆ. ಅಲ್ಲಿಂದ ಬಂದ ಮೇಲೆ ಅವ್ನು ಪ್ರೀತೀನಾ ಮರೀತಾನಾ..?
ಮತ್ತೆ ಪ್ರೀತಿ ಅವನ ಜೀವನದಲ್ಲಿ ಸಿಕ್ಕುತ್ತಾ..? ಪ್ರಾರಂಭದ ಅಂತ್ಯ ಚೆನ್ನಾಗಿರುತ್ತಾ..? ಅಥವಾ ಏನಾಗುತ್ತೆ. ಈ ಎಲ್ಲವನ್ನೂ ತಿಳ್ಕೊಳ್ಳೋಕೆ ನೀವು ಈ ಸಿನಿಮಾ ನೋಡ್ಬೇಕು.
ಒಂದು ಕಲರ್‌ಫುಲ್ ಸಿನಿಮಾ ಮಾಡೋಕೆ ಪ್ರಾರಂಭ ಮಾಡಿರೋ ತಂಡದ ಕಥೆಯಲ್ಲಿ ಹೊಸತನ ಹುಡುಕೋದಕ್ಕಿಂತ ಪ್ರೀತಿಯಲ್ಲಿ ತಂದೆ-ತಾಯಿ ಸಾಧಿಸೋ ಹಠ ಇದರಿಂದ ಶುರುವಾಗೋ ಕುಡಿಯೋ ಚಟ ಎಲ್ಲವೂ ಬದಲಾಗಿ ಕೊನೆಗೆ ಸಿಗೋ ಒಂದು ಒಳ್ಳೆಯ ಪಾಠ. ಇದಿಷ್ಟು ಪ್ರಾರಂಭ. ಮನೋರಂಜನ್‌ಗೆ ಹೊಸ ನಟಿ ಕೀರ್ತಿ ಕಲ್ಕೇರಿ ಜೋಡಿಯಾಗಿದ್ದಾರೆ. ದೊಡ್ಡ ಪಾತ್ರವರ್ಗ ಇಲ್ಲ, ಜೊತೆಗೆ ಪಾತ್ರವರ್ಗದಲ್ಲೂ ಹೊಸಬರೇ ಇದ್ದು ಚಿತ್ರ ಪ್ರಾರಂಭ ಮಾಡ್ತಿರೋರದ್ದು ಅನ್ನೋದು ಕನ್ಫರ್ಮ್.
ಓಂ, ಕರ್ನಾಟಕ ಟಿವಿ