ಮೈಸೂರು : ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ(Pratap simha, MP) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former Chief Minister Siddaramaiah)ವಿರುದ್ಧ ಕಿಡಿಕಾರಿದ್ದಾರೆ. ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಸ್ತಬ್ಧ ಚಿತ್ರ ಮೆರವಣಿಗೆಗೆ ಸಮಾಜ ಸುಧಾರಕ ನಾರಾಯಣ ಗುರುಗಳ(Narayana Gurus)ಸ್ತಬ್ಧಚಿತ್ರವನ್ನು ಆಯ್ಕೆ ಮಾಡಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಕ್ಯಾಂಟೀನ್ ಗೆ ಹೆಸರಿಡುವಾಗ ಈ ನೆಲದ ಮಹಾಪುರುಷರ ಹೆಸರು ನೆನಪಾಗಿಲ್ಲ, ಇವರು ಅಧಿಕಾರದಲ್ಲಿದ್ದಾಗ ಮಹನೀಯರು ನೆನಪಾಗುವುದಿಲ್ಲ, ಈಗ ಮಹನೀಯರು ಇವರಿಗೆ ನೆನಪಾಗಿದೆ. ಇವರ ಅಧಿಕಾರವಧಿಯಲ್ಲಿ ನಾರಾಯಣ ಗುರುಗಳು, ಒನಕೆ ಓಬವ್ವ, ಮೈಸೂರಿನ ಮಹಾರಾಜರು ಇಂತಹ ಮಹನೀಯರು ನೆನಪಾಗುವುದಿಲ್ಲ, ಈಗ ಇವರಿಗೆ ನೆನಪಾಗುತ್ತದೆ ಎಂದು ಕಿಡಿಕಾರಿದ್ದು, ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಾತನಾಡುತ್ತಿದ್ದಾರೆ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ ಎಂಬಂತೆ ಅವರ ವರ್ತನೆ ಎಂದು ತಿರುಗೇಟು ನೀಡಿತ್ತು, ಗಣರಾಜ್ಯೋತ್ಸವದಲ್ಲಿ ಸ್ತಬ್ದ ಚಿತ್ರ ಮೆರವಣಿಗೆ ಒಂದು ವಿಷಯ ಕೊಟ್ಟಿದ್ದಾರೆ, ಆ ವಿಷಯಕ್ಕೆ ತಕ್ಕಂತೆ ಆಯ್ಕೆ ಮಾಡಲಾಗುತ್ತದೆ. ಇವರು ಬೇಕಾದರೆ ಆಯ್ಕೆಯ ಮಾರ್ಗಸೂಚಿ ಓದಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.