Political Story: ಕೊಡವ ಮತ್ತು ತುಳು ಭಾಷೆಗೆ ಸೂಕ್ತ ಸ್ಥಾನಮಾನಕ್ಕೆ ಪ್ರತೀಕ್ ಪೊನ್ನಣ್ಣ ಒತ್ತಾಯಿಸಿದ್ದಾರೆ. ಈ ಬಗ್ಗೆ ಬರೆದಿರುವ ಅವರು,
ಕೇರಳ ರಾಜ್ಯ ಭಾಷಾ ಕಾಯ್ದೆ 1969ರ, ಸೆಕ್ಷನ್ 3ರ ಅಡಿಯಲ್ಲಿ (ಭಾಷಾ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳು). ಇದರ ಅಡಿಯಲ್ಲಿ ಕೇರಳ ರಾಜ್ಯದ ಭಾಷಾ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿ ಆಯಾ ಭಾಷಾ ಅಲ್ಪಸಂಖ್ಯಾತರು ಅವರ ಭಾಷೆಯಲ್ಲೇ ಸರ್ಕಾರಿ ಕಚೇರಿಗಳಲ್ಲಿ ವ್ಯವಹಾರ ಮಾಡಬಹುದು ಎಂದು ಇದೆ.
ಆದರೆ ಕರ್ನಾಟಕದಲ್ಲಿರುವ ಭಾಷಾ ಅಲ್ಪಸಂಖ್ಯಾತರ ಭಾಷೆಯನ್ನು ಬೆಳೆಸಲು ಈ ರೀತಿಯ ಯಾವುದೇ ಕಾನೂನು ಇಲ್ಲಾ, ಇದರಿಂದ ಸಂವಿಧಾನದ ಆರ್ಟಿಕಲ್ 29 ರ ಅಡಿಯಲ್ಲಿ ಭಾಷಾ ಅಲ್ಪಸಂಖ್ಯಾತರು ತಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ.
ಆದಷ್ಟು ಬೇಗ ಕೇರಳ, ತೆಲಂಗಾಣ, ಉತ್ತರಾಖಂಡ, ಪಶ್ಚಿಮ ಬಂಗಾಳ, ಜಾರ್ಖಂಡದ ರೀತಿಯಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಾದ ಕೊಡವ ಮತ್ತು ತುಳು ಭಾಷೆಗೆ ಕೂಡ ಸೂಕ್ತವಾದ ಸ್ಥಾನಮಾನ ನೀಡಬೇಕು ಎಂದು ಪ್ರತೀಕ್ ಒತ್ತಾಯಿಸಿದ್ದಾರೆ.
‘ಕಾಂಗ್ರೆಸ್‌ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಎಂಬ ಕನಿಷ್ಠ ಅರಿವು ಅವರಿಗಿಲ್ಲ’
‘ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ನಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲ’