ಕೆಲ ದಿನಗಳ ಹಿಂದೆಯಷ್ಟೇ ಗದಗದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿತ್ತು. ಆದರೆ ಅಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ ಎಂದು ಆರೋಪ ಬಂದಿತ್ತು. ಇದೇ ವೇಳೆ ಅಲ್ಲಿಗೆ ತಂಪು ಪಾನೀಯ ಮಾರಲು 22 ವರ್ಷದ ಹಸನ್ ಸಾಬ್ ಬಂದಿದ್ದಾನೆ. ಆದರೆ ಅಲ್ಲಿರುವ ಜನರೆಲ್ಲ, ಇಲ್ಲಿ ಬಂದಿರುವ ಪಾನೀಯ, ತಮಗಾಗಿ ಬಂದಿದ್ದು, ಫ್ರೀ ಇರಬಹುದು ಎಂದು ತಿಳಿದು, ಮುಗಿಬಿದ್ದು, ಆ ಬಾಟಲಿಗಳನ್ನ ತೆಗೆದುಕೊಂಡು ಹೋಗಿದ್ದಾರೆ. ಹಸನ್ ಸಾಬ್ ಎಷ್ಟು ಹೇಳಿದ್ರೂ ಕೇಳದೇ, ದುಡ್ಡು ಕೊಡದೇ ಹೋಗಿದ್ದಾರೆ.
ಪರಿಸ್ಥಿತಿನ್ನು ನಿಭಾಯಿಸಲು ಸಾಧ್ಯವಾಗದೇ, ಹಸನ್ ಅಳಲು ಶುರು ಮಾಡಿದ್ದ. ಆಗ ಪೊಲೀಸರು, ನೀನು ಇಲ್ಲಿಂದ ಹೊರಡು ಎಂದು ಹೇಳಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿತ್ತು. ಬಿಜೆಪಿಯ ಅವಾಂತರಕ್ಕೆ ಪಾಪ ಬಡ ಹುಡುಗ 35 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ ಎಂದು ವಿಪಕ್ಷಗಳು ಕೂಡ ಹರಿಹಾಯ್ದಿದ್ದವು.
ಇದನ್ನು ಗಮನಿಸಿದ್ದ ಸಂಸದ ಪ್ರತಾಪ್ ಸಿಂಹ, ಇಂದು ಹಸನ್‌ಗೆ 35 ಸಾವಿರ ರೂಪಾಯಿ, ಟ್ರಾನ್ಸಫರ್ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ, ಸಂಸದ ಪ್ರತಾಪ್ ಸಿಂಹ, ಸಮೀರ್ ಹಸನ್ ಸಾಬ್ ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಸಮೀರ್ ಹಸನ್ ಸಾಬ್ ಗೆ ಹಣ ಕಳುಹಿಸಿದ್ದೇನೆ. Sorry brother. ಧನ್ಯವಾದಗಳು. pic.twitter.com/Ah1IVFmbuf
— Pratap Simha (@mepratap) April 30, 2023
‘ಕೆ.ಆರ್.ಪುರದಲ್ಲಿ ಗೂಂಡಾವರ್ತನೆ ತಾಂಡವವಾಡುತ್ತಿದ್ದು ಅದಕ್ಕೆ ಕಡಿವಾಣ ಬೇಕಿದೆ’
ಬಿಜೆಪಿ ಪ್ರಣಾಲಿಕೆ ರಿಲೀಸ್, ಪ್ರತಿದಿನ ನಂದಿನಿ ಹಾಲು ವಿತರಣೆಗೆ ನಿರ್ಧಾರ..