ಹಾಸನ: ವಿಧಾನಸೌಧ ಶಾಪಿಂಗ್ ಮಾಲ್ ಆಗಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರೀತಂಗೌಡ, ಪ್ರಿಯಾಂಕ್ ಬಹುಶಃ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಐಟಿ ಬಿಟಿ ಎಲ್ಲಾ ಮಾಡಿದಾರೆ. ಅವರು ಮಾಡಿರೋದನ್ನ ಈಗ ನೆನಪಿಸಿಕೊಳ್ಳುತ್ತಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ.
‘ಯಾರೋ ಇಂಜಿನಿಯರ್ ಹತ್ರಾ ಹಣ ಸಿಕ್ಕಿದ್ರೆ ನಾವು ಉತ್ತರ ಕೊಡೋಕೆ ಆಗುತ್ತಾ..?’
ಈ ಬಗ್ಗೆ ಮಾತು ಮುಂದುವರಿಸಿದ ಪ್ರೀತಂಗೌಡ, ಅವರ ತಂದೆಯವರು ಐವತ್ತು ವರ್ಷ ಕೇಂದ್ರ ರಾಜ್ಯದಲ್ಲಿ ಅಧಿಕಾರಲ್ಲಿ ಇದ್ದವರು. ಅವರು ಮಾಡಿದ್ದನ್ನ ಮೆಲುಕು ಹಾಕುತ್ತಿರಬಹುದು. ಮುಂದೆ ಅಧಿಕಾರಕ್ಕೆ ಬಂದರೆ ಹೀಗೆಲ್ಲ ಮಾಡಬಹುದು ಅಂತಾ ಬಾವನೆ ಇರಬಹುದು. ಆದರೆ ಅವರಿಗೆ ಅಂತಾ ಅವಕಾಶ ಕೊಡಲ್ಲ, ಶಾಪಿಂಗ್ ಮಾಲ್ ಮಾಡಲು ಬಿಡಲ್ಲ ಖರೀದಿ ಮಾಡಲು ಬಿಡಲ್ಲ. ಅವರು ಬಹಳ ಬೆವರು ಸುರಿಸಿ ಹೊಲ ಉತ್ತಿ ಬನ್ನೇರುಘಟ್ಟದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಿದಾರೆ. ಸಾವಿರಾರು ಎಕರೆ ಜಮೀನನ್ನು ಮಾಡಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ದ ಬಗ್ಗೆ ಮಾತಾಡೋದು ದೆವ್ವದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದಿದ್ದಾರೆ.
ಅಲ್ಲದೇ, ಪ್ರಿಯಾಂಕ್ ಖರ್ಗೆ ವೈಟ್ ಕಾಲರ್ ಪೊಲಿಟೀಷಿಯನ್,ಸೋ ಕಾಲ್ಡ್ ದಲಿತರ ಪರ ಮಾತಾಡೊ ವ್ಯಕ್ತಿ. ಅವರಿಗೆ ಬೇಕಾದಾಗ ದಲಿತ ಕಾರ್ಡ್ ಉಪಯೋಗಿಸುವ ದಲಿತರಿಗೆ ಏನು ಮಾಡದೆ ತಮ್ಮ ಬೇಳೆ ಬೇಯಿಸಿ ಕೊಂಡ ನಾಯಕ. ಅವರ ಬಗ್ಗೆ ಹೆಚ್ಚು ಮಾತನಾಡೋ ಅಗತ್ಯ ಇಲ್ಲಾ ಎಂದಿದ್ದಾರೆ.
‘ಫೋಟೋ ಇಟ್ಕೊಂಡು ಮಾರ್ಕೇಟ್ ಮಾಡೋವ್ರಿಗೆ ಏನ್ಮಾಡಕ್ಕಾಗತ್ತೆ..?’
ಅಲ್ಲದೇ, ತಂದೆ ಹೆಸರಲ್ಲಿ ಹೆಸರು, ತಾತನ ಹೆಸರು ಹೇಳಿಕೊಂಡು ರಾಜಕೀಯ ಮಾಡೋರಿಗೆ ಯಾವ ರಾಜಕೀಯ ಬದ್ದತೆ ಇರುತ್ತೆ ಗೊತ್ತಿಲ್ಲ. ಅವರ ತಟ್ಟೆಯಲ್ಲಿ ಹೆಗಣ ಬಿದ್ದಿದೆಯೊ ಅಥವಾ ಅದಕ್ಕಿಂದ ದೊಡ್ಡ ಪ್ರಾಣಿ ಬಿದ್ದಿದೆಯೊ ನೋಡಿಕೊಳ್ಳಲಿ. ಆನಂತರ ಇನ್ನೊಬ್ಬರ ತಟ್ಟೆ ಬಗ್ಗೆ ಯೋಚನೆ ಮಾಡಲಿ. ಅವರು ಯಾವ ಹೊಲದಲ್ಲಿ ಯಾವ ಬೆಳೆ,ಐದು ಆರೋ ಬೆಳೆ ಬೆಳೆ ದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಅದನ್ನ ಮೊದಲು ಹೇಳಲಿ. ಆನಂತರ ವಿಧಾನಸಭೆ ರಾಜಕಾರಣದ ಬಗ್ಗೆ ಮಾತನಾಡೋಣ ಪ್ರೀತಂಗೌಡ ಕುಟುಕಿದ್ದಾರೆ.