ಹಾಸನ: ಸ್ಯಾಂಟ್ರೊ ರವಿ ಹಲವು ಬಿಜೆಪಿ ನಾಯಕರ ಜೊತೆ ಫೋಟೊ ತೆಗೆಸಿಕೊಂಡ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾತನಾಡಿದ ಪ್ರೀತಂಗೌಡ, ಬ್ರೋಕರ್ ಹೇಳೋ ಮಾತಿಗೆ ಬೆಲೆ ಕೊಡೋದು ಬೇಡಾ ಎಂದಿದ್ದಾರೆ.
‘ಯಾರೋ ಇಂಜಿನಿಯರ್ ಹತ್ರಾ ಹಣ ಸಿಕ್ಕಿದ್ರೆ ನಾವು ಉತ್ತರ ಕೊಡೋಕೆ ಆಗುತ್ತಾ..?’
ಅಲ್ಲದೇ, ನನ್ನ ಜೊತೆಯೂ ಹಲವರು ಫೋಟೊ ತೆಗೆಸಿಕೊಳ್ತಾರೆ. ಮೋದಿಯವರು ಒಬ್ಬರು ಸಿಗೊದಿಲ್ಲ ಕಾರಣ ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ಇರುತ್ತದೆ. ಉಳಿದ ದೇಶದ ಎಲ್ಲಾ ನಾಯಕರ ಜೊತೆ ಫೋಟೊ ತೆಗೆಸಿಕೊಳ್ಲೊ ಉದಾಹರಣೆ ಸಿಗುತ್ತೆ. ಅದೇ ಫೋಟೊ ಇಟ್ಟುಕೊಂಡು ಮಾರ್ಕೇಟ್ ಮಾಡಿಕೊಂಡು ಅವರು ಕ್ಲೋಸ್ ಇವರು ಕ್ಲೋಸ್ ಅಂದ್ರೆ ಏನ್ಮಾಡೋದು..? ನಾನೂ ಮೋದಿಯವರು ನನಗೆ ತುಂಬಾ ಆತ್ಮೀಯರು ಎಂದು ಹೇಳಿಕೊಳ್ಳಬಹುದು. ಆದರೆ ಮೋದಿಯವರಿಗೆ ನಾನು ಆತ್ಮೀಯನ ಎನ್ನೋದು ಮುಖ್ಯ ಎಂದಿದ್ದಾರೆ.
ಹಾಗಾಗಿ ಅವರ ಬೇಳೆ ಬೇಯಿಸಿಕೊಳ್ಳಲು ಅವರು ಆತ್ಮೀಯರು ಇವರು ಆತ್ಮೀಯರು ಎಂದು ಹೇಳಿಕೊಂಡ್ರೆ ಏನ್ಮಾಡೋದು..? ಇಂತಹ ಬ್ರೋಕರ್ ಗಳು ಸಮಾಜದಲ್ಲಿ ಬಹಳ ಜನ ಇರ್ತಾರೆ. ಬ್ರೊಕರ್ ಹೇಳೊ ಮಾತಿಗೆ ಮಹತ್ವ ಕೊಡೋದು ಬೇಡಾ. ಇದೇ ರೀತಿ ಅವರ ಬಗ್ಗೆ ಮಾತನಾಡಿದ್ರೆ ಏನಾಗುತ್ತೆ ಯೋಚನೆ ಮಾಡಲಿ ಎಂದು ಪ್ರೀತಂಗೌಡ ವಾರ್ನಿಂಗ್ ಕೊಟ್ಟಿದ್ದಾರೆ.
‘ನನ್ನ ಬಾಗಿಲಿಗೆ ಜನ ಬರ್ಲಿ ಅಂತೇಳಿ ಸಿದ್ದರಾಮಯ್ಯ ಈ ರೀತಿಯಾಗಿ ಮಾತಾಡಿದ್ದಾರೆ’
ಅಲ್ಲದೇ, ಅವರ ಸರ್ಕಾರ ಇದ್ದಾಗ ಯಾರೋ ಬ್ರೋಕರ್ ಗಳೊ ಸಿದ್ದರಾಮಯ್ಯ ಜೊತೆ ಫೋಟೊ ತೆಗೆಸಿಕೊಳ್ಳಬಹುದು.ಆಗ ಅವರಿಗೆ ಸಿದ್ದರಾಮಯ್ಯ ಅವರಿಗೆ ಸಂಬಂದ ಇದೆ ಎಂದರೆ ಆಗುತ್ತಾ? ಅವರು ಹೇಳಿದ್ದನ್ನ ಕೇಳಿ ಸಿಎಂ ಅಥವಾ ಗೃಹ ಸಚಿವರು ಹೌದು ಇವರು ನನ್ನ ಆತ್ಮೀಯ ಎಂದರೆ ಉತ್ತರ ಕೊಡಬಹುದು. ಚುನಾವಣೆ ಸಂದರ್ಭದಲ್ಲಿ ವಿರೋದ ಪಕ್ಷಗಳು ಏನೇ ಸಿಕ್ಕಿದ್ರು ಮೈಗೆ ಒರೆಸೊಕೆಲಸ ಮಾಡ್ತಾರೆ. ಇಂತಹ ನೂರಾರು ಟಿಪ್ಪಣಿ ಬರಹುದು ಯಾರು ತಲೆ ಕೆಡಿಸಿಕೊಳ್ಳಬಹುದು. ಈಗ ಮಾತಾಡೋದು ಕೇವಲ ರಾಜಕೀಯ ಮಾತೇ ಹೊರತು ಆದಾರ ಇರೋ ಮಾತುಗಳಲ್ಲ. ಪ್ರಿಯಾಂಕ್ ಖರ್ಗೆ ಸೇರಿ ಎಲ್ಲರೂ ಚುನಾವಣೆ ಗೆಲ್ಲಲು ಹೀಗೆ ಮಾತಾಡ್ತಾರೆ ಎಂದು ಪ್ರೀತಂಗೌಡ ಟೀಕೆ ಮಾಡಿದ್ದಾರೆ.