ಹಾಸನ: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಪ್ರೀತಂಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಬಸವಾಜ ಬೊಮ್ಮಾಯಿ ಪ್ರಧಾನಿ ಎದುರು ನಾಯಿಯಂತೆ ಇರುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಆಕ್ರೋಶ ವ್ಯಕ್ತಪಡಿಸಿದ ಪ್ರೀತಂಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದ ಇತಿಮಿತಿಯನ್ನ ಮೀರಿ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದವರಲ್ಲ. ರಾಜಕಾರಣದಲ್ಲಿರುವವರು ಮೊದಲು ರಾಜಕಾರಣ ಮಾಡುವವರ ಬಗ್ಗೆ ಗೌರವ ತೋರಿಸಿದರೆ, ಸಾರ್ವಜನಿಕರು ಪಕ್ಷಾತೀತವಾಗಿ ರಾಜಕಾರಣಿಗಳು ಬಗ್ಗೆ ಗೌರವನ್ನು ಇಟ್ಟುಕೊಳ್ತಾರೆ. ಈ ಬೇಸಿಕ್ ಅನ್ನ ಅರ್ಥ ಮಾಡಿಕೊಳ್ಳದೇ ಮಾತನಾಡಿದ್ದಾರೆಂದು ಪ್ರೀತಂಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಅಪಾರ ಅನುಭವಸ್ಥರು, ಹತ್ತಾರು ಭಾರಿ ರಾಜ್ಯದ ಬಜೆಟ್ ಅನ್ನ ಮಂಡನೆ ಮಾಡಿರುವಂತಹ ಮುತ್ಸದ್ಧಿ. ಸಮಾಜದ ಬಗ್ಗೆ ಕಳಕಳಿ ಇರುವವರು ಅಂತಾ ಪಕ್ಷಾತೀತವಾಗಿ ಮಂಡನೆ ಮಾಡ್ತಿದ್ದನ್ನ ಗಮನಿಸಿದ್ದೇವೆ. ಆ ಗೌರವ ಯಾವಾಗ ಬರುತ್ತೆ ಅಂದ್ರೆ ಸಮಾಜದಲ್ಲಿ ಇತಿಮಿತಿಯಲ್ಲಿ ಮಾತಾನಾಡಿ. ಯಾವುದು ಸಂವಿಧಾನಿಕ ಹುದ್ದೆ ಇದೆ. ಆ ಹುದ್ದೆಗೆ ಗೌರವ ಕೊಡುವಂತಹ ಕೆಲಸವನ್ನ ಮಾಡಿದಾಗ ಮಾತ್ರ ಎಂದು ಪ್ರೀತಂಗೌಡ ಹೇಳಿದ್ದಾರೆ .
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಬಿಜೆಪಿ ಪ್ರತಿಭಟನೆ
ಅಲ್ಲದೇ, ರಾಜಕೀಯವಾಗಿ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ನಾನೇ ನಾಯಕನಾಗಬೇಕೆಂಬ ಹತಾಶ ಮಾನೋಭಾವ ಇದೆ. ಅವರ ನಡುವೆ ನಡೆಯುತ್ತಿರುವ ಒಳ ಜಗಳ. ಒಂದ್ಕಡೆ ಡಿಕೆ ಶಿವಕುಮಾರ್, ಮತ್ತೊಂದ್ಕಡೆ ಮಲ್ಲಿಕಾರ್ಜುನ ಖರ್ಗೆಯವರು, ಮನೆಯೊಂದು ಮೂರುಬಾಗಿಲು ಆಗಿರುವ ಸಂದರ್ಭದಲ್ಲಿ ನನ್ನ ಬಾಗಿಲಿಗೆ ಜನ ಬರ್ಲಿ ಅಂತೇಳಿ ಈ ರೀತಿಯಾಗಿ ಕ್ಷುಲ್ಲಕವಾಗಿ ಮಾತಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಬಹಳ ನೆಗೆಟಿವ್ ಆಗಿ ಜನ ಮಾತಾನಾಡುವಂತೆ ಅವರು ಮಾಡಿಕೊಂಡಿದ್ದಾರೆ.
ನಾನು ಅವರಲ್ಲಿ ಮನವಿ ಮಾಡುತ್ತೇನೆ, ಬಹಳ ಹಿರಿಯರಿದ್ದೀರಿ. ಏಳೆಂಟು ಬಾರಿ ಶಾಸಕರಾಗಿದ್ದೀರಿ, ವಿರೋಧ ಪಕ್ಷದ ನಾಯಕರಾಗಿದ್ದೀರಿ, ಉಪಮುಖ್ಯಮಂತ್ರಿಯಾಗಿದ್ದೀರಿ, ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ನಾಳೆ ಇನ್ನೊಬ್ಬರು ಬಗ್ಗೆ, ನಿಮ್ಮ ಬಗ್ಗೆ ಮಾತಾನಾಡೋದಕ್ಕೂ ಮುಂಚೆ ನೀವೇನೆ ದಾರಿ ತೋರಿಸಿದ ರೀತಿ ಆಗುತ್ತೆ. ರಾಜಕೀಯ ರಂಗವನ್ನ ಯಾವ ಕಡೆಗೆ ತೆಗೆದುಕೊಂಡು ಹೋಗಬೇಕು ಅಂತಿದ್ದೀರಾ ಅಂತಾ ಎಂದು ಪ್ರೀತಂ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ.
‘ಯಾರೋ ಇಂಜಿನಿಯರ್ ಹತ್ರಾ ಹಣ ಸಿಕ್ಕಿದ್ರೆ ನಾವು ಉತ್ತರ ಕೊಡೋಕೆ ಆಗುತ್ತಾ..?’
ನಮ್ಮಂತ ಯುವ ಶಾಸಕರು, ಮೊದಲನೇ ಬಾರಿ ಶಾಸಕರಾಗಿದ್ದವರು. ಇನ್ನೂ ರಾಜಕೀಯ ರಂಗದಲ್ಲಿ ಮೂವತ್ತೈದು ವರ್ಷ ಇರಬೇಕು. ಈ ಸಂದರ್ಭದಲ್ಲಿ ನೀವುಈ ರೀತಿಯಾಗಿ ಮಾತಾಡಿದ್ರೆ ಯಾವ ಸಂದೇಶವನ್ನು ಸಮಾಜಕ್ಕೆ ಕೊಡೋದಕ್ಕೆ ಹೊರಟಿದ್ದೀರಾ..? ನಾನು ಅವರಲ್ಲಿ ನೇರವಾಗಿ ಪ್ರಶ್ನೆ ಮಾಡುತ್ತೇನೆ. ಮುಂದೆಯಾದರೂ ಸರಿ, ರಾಜಕೀಯವಾಗಿ ಏನಾದ್ರೂ ಮಾತಾಡ್ಲಿ. ಆದ್ರೆ ಮುಖ್ಯಮಂತ್ರಿಗಳ ಬಗ್ಗೆ ಅದು ಒಂದು ಸಂವಿಧಾನಿಕ ಹುದ್ದೆ . ನಾಯಿಮರಿ ರೀತಿಯಲ್ಲಿ ಇರ್ತಾರೆ, ಪ್ರಧಾನ ಮಂತ್ರಿ ಬಳಿ ಹೋಗೋದಕ್ಕೆ ಆಗಲ್ಲ ಅಂತಾ ಹೇಳ್ತಾರೆ. ಅದನ್ನು ಯಾವುದೇ ಕಾರಣಕ್ಕೂ ಒಪ್ಪೋದಕ್ಕೆ ಸಾಧ್ಯವಿಲ್ಲ ಎಂದು ಪ್ರೀತಂ ಗೌಡ ಹೇಳಿದ್ದಾರೆ.
ರಾಜಕೀಯ ಪ್ರೀತಂಗೌಡ್ರು ಬಗ್ಗೆ ಅವರ ಬಗ್ಗೆ ಎಲ್ಲರ ಬಗ್ಗೆ ಮಾತಾಡೋದು ಸಹಜ. ಆದ್ರೆ ಮುಖ್ಯಮಂತ್ರಿಯಂತಹ ಸ್ಥಾನ ರಾಜ್ಯದ ದೊರೆ, ಆ ದೊರೆ ಬಗ್ಗೆ ಮಾತಾಡಿದ್ರೆ ರಾಜ್ಯದ ಬಗ್ಗೆ ಮಾತಾಡಿದ ಹಾಗೆ. ಪಕ್ಕದ ತಮಿಳುನಾಡು, ಪಕ್ಕದ ಆಂದ್ರದಲ್ಲಿ ನೋಡಿ ಕಲಿಬೇಕು. ಯಾವ ರೀತಿಯಾಗಿ ಪಕ್ಷಾತೀತವಾಗಿ ಒಂದು ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಯಾವ ರೀತಿಯಾಗಿ ವಿರೋಧಪಕ್ಷಗಳು ಒಗ್ಗಟ್ಟಾಗಿರುತ್ತವೆ ಅನ್ನೋದನ್ನ ನೋಡಿ ಕಲಿಬೇಕು ಎಂದು ಪ್ರೀತಂ ಗೌಡ ಹೇಳಿದ್ದಾರೆ.