Saturday, July 5, 2025

Latest Posts

‘ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ಬಿಇಓ ಬಲರಾಮ್‌ರನ್ನ ವರ್ಗಾವಣೆ ಮಾಡಿ’

- Advertisement -

ಹಾಸನ : ಶಿಕ್ಷಣ ಇಲಾಖೆಯ ಬಿಇಓ ಬಲರಾಂ ಅವರು ಬಿಜೆಪಿ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವುದರಿಂದ ಪರಿಶೀಲಿಸಿ ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹಾಸನದ ಬಿಇಓ ಬಲರಾಂ ಅವರು ಬಿಜೆಪಿ ಪಕ್ಷದ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ. ಅವರ ಕೆಳಗೆ ಕೆಲಸ ಮಾಡುವ ಶಿಕ್ಷಕರಿಗೆ ಒತ್ತಡ ಹೇರುತ್ತಿದ್ದಾರೆ. ಹಣ ಮತ್ತು ಇತರೆ ಆಮಿಷ ಒಡ್ಡಿ ಈಡಿಸಿ ಓಟ್ ಹಾಕಿಸಲು ಒತ್ತಡ ಹಾಕುತ್ತಿದ್ದಾರೆ. ಅವರನ್ನ ವರ್ಗಾವಣೆ ಮಾಡಿ ಎಂದು ಈಗಾಗಲೇ ಜಿಲ್ಲಾಧಿಕಾರಿ ಮತ್ತು ರಾಜ್ಯ ಚುನಾವಣಾ ಅಧಿಕಾರಿಗೂ ಕೂಡ ಪತ್ರ ಬರೆದು ಮನವಿ ಮಾಡಿದ್ದೆನು. ಆದ್ರೆ ಇಲ್ಲಿಯವರೆಗೂ ಅವರನ್ನು ವರ್ಗಾವಣೆ ಮಾಡಿರುವುದಿಲ್ಲ. ಬಿಇಓ ಕೂಡ ಸ್ಥಳೀಯರಾಗಿದ್ದು, ತಮ್ಮ ಪ್ರಭಾವ ಬೀರುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ತುರ್ತಾಗಿ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಏಪ್ರಿಲ್ ೨೦ ರಂದು ನಡೆದ ಜೆಡಿಎಸ್ ರಾಲಿಗೆ ಜನರು ನಿರೀಕ್ಷೆ ಮೀರಿ ಬಂದಿದ್ದಾರೆ. ನಮ್ಮ ಪಕ್ಷದ ಶಕ್ತಿ, ಇಲ್ಲಿನ ಶಾಸಕರ ಭ್ರಷ್ಟಾಚಾರದ ವಿರುದ್ಧ ಜನರು ರೊಚ್ಚಿಗೆದ್ದು ಬಂದಿದ್ದರು. ಯಾವ ನಾಯಕರ ಬಗ್ಗೆ ಮಾತಾಡಲ್ಲ ಎಂದು ಹೇಳುತ್ತಿರೊ ಶಾಸಕರ ಮಾತಿಗೆ ತಿರುಗೇಟು ನೀಡಿ, ಬಹುಶಃ ಈಗ ಬುದ್ದಿ ಬಂದಿರಬೇಕು, ಜನರೇ ಅವರಿಗೆ ಉತ್ತರ ಕೊಡ್ತಾರೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಮಾತನಾಡುತ್ತಾ, ಭವಾನಿ ರೇವಣ್ಣ ಅವರು ನಮ್ಮ ತಾಯಿ ಇದ್ದಾಗೆ, ಅವರಿಗೆ ಟಿಕೇಟ್ ಸಿಕ್ಕಿದ್ರೆ ನಾನು ಕೆಲಸ ಮಾಡುತ್ತಿದ್ದೆ,

ನಮ್ಮ ನಡುವೆ ಯಾವುದೇ ಗೊಂದಲ ಇರಲಿಲ್ಲ, ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ನಾನು ಶಾಸಕನಾಗಿ ಆಯ್ಕೆ ಆಗಿ ಬಂದ ಮೇಲೆ ಹಾಸನ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಇದೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ.

ಉದ್ಯೋಗ ಸೃಷ್ಟಿಗಾಗಿ ಆದ್ಯತೆ ನೀಡುವ ಕೆಲಸ ಮಾಡುತ್ತೇವೆ ಎಂದರು. ಹಾಸನದ ಶಾಸಕರಿಗೆ ಸೋಲಿನ ಭಯ ಶುರುವಾಗಿದೆ. ಹಾಗಾಗಿಯೇ ಒಮ್ಮೆ ರೇವಣ್ಣರನ್ನ ಹೊಗಳೋದು, ಒಮ್ಮೆ ತೆಗಳೋದು ಮಾಡುತ್ತಿದ್ದಾರೆ. ಇದ್ಯಾವುದು ಇನ್ಮುಂದೆ ನಡೆಯೋದಿಲ್ಲ ಎಂದು ತಿರುಗೇಟು ನೀಡಿದರು. ಮಾಧ್ಯಮಗಳನ್ನೆ ದಿಕ್ಕು ತಪ್ಪಿಸಲು ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಹೇಳಿ, ನಮ್ಮ ಕಾರ್ಯಕ್ರಮಕ್ಕೆ ಪ್ರಚಾರ ಸಿಗದಂತೆ ಮಾಡೊ ಯತ್ನ ಮಾಡಿದರು ಎಂದು ಆಕ್ರೋಶವ್ಯಕ್ತಪಡಿಸಿದರು. ಆದರೆ ನನ್ನ ಪುಣ್ಯವೊ ಏನೋ, ದೇವೇಗೌಡರು, ಕುಮಾರಸ್ವಾಮಿ ಅವರು ಬಂದು ನಮಗೆ ಜನರ ಬೆಂಬಲ ಸಿಕ್ತು. ಹಾಸನದಲ್ಲಿ ಸ್ವರೂಪ್ ಗೆದ್ದರೆ ರೇವಣ್ಣ ಕುಟುಂಬದ ಹಿಡಿತದಲ್ಲಿ ಇರಬೇಕು ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡುತ್ತಾ, ಇದೆಲ್ಲಾ ಕೇವಲ ಆರೋಪ ಅಷ್ಟೇ. ಬಿಜೆಪಿ ಹಾಗು ಕಾಂಗ್ರೆಸ್ ಹೈ ಕಮಾಂಡ್ ಇರೋದು ದೆಹಲಿಯಲ್ಲಿ. ನಮ್ಮ ಹೈ ಕಮಾಂಡ್ ದೇವೇಗೌಡರು, ಕುಮಾರಸ್ವಾಮಿ ರೇವಣ್ಣ ಅವರು. ಹಾಗಾಗಿ ನಾವು ಅವರ ಮಾರ್ಗದರ್ಶನ ದಲ್ಲಿ ಕೆಲಸ ಮಾಡ್ತೇವೆ ಯಾವುದೇ ಒತ್ತಡ ಇರೋದಿಲ್ಲ ಎಂದು ಟಾಂಗ್ ನೀಡಿದರು. ಚುನಾವಣೆಯಲ್ಲಿ ಪ್ರಚಾರದ ವೇಳೆ ಹೋದ ಕಡೆಯಲ್ಲ ಅಭೂತಪೂರ್ವ ಬೆಂಬಲ ನೀಡುತ್ತಿರುವುದಾಗಿ ಇದೆ ವೇಳೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ನಗರಸಭೆ ಸದಸ್ಯ ನವೀನ್, ಮಾಧ್ಯಮ ವಕ್ತಾರ ಹೊಂಗೆರೆ ರಘು, ಅನೀಲ್ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಶೆಟ್ಟರು ಇತರರು ಉಪಸ್ಥಿತರಿದ್ದರು.

ಅಕ್ಷಯ ತೃತೀಯಾಗೆ ಚಿನ್ನ ತೆಗೆದುಕೊಳ್ಳದಿದ್ದರೂ ಇದನ್ನು ಖಂಡಿತ ಖರೀದಿಸಿ..

‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್‌ ಸಿಗಲಿಲ್ಲ’

ಭಾರೀ ಮಳೆಯಿಂದಾಗಿ ಅಮಿತ್ ಶಾ ಕಾರ್ಯಕ್ರಮ ರದ್ದು, ಇನ್ನೊಮ್ಮೆ ಬರುತ್ತೇನೆಂದ ಚಾಣಕ್ಯ

- Advertisement -

Latest Posts

Don't Miss