ಹಾಸನ : ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಭರ್ಜರಿ ರೋಡ್ ಶೋ ನಡೆಸಿದ್ದು, ವಿರೋಧಿಗಳ ವಿರುದ್ಧ ಹರಿಹಾಯ್ದಿದ್ದಾರೆ.
‘ಹಾಸನ ರಾಜಕಾರಣದ ಇತಿಹಾಸದಲ್ಲಿ ಇಷ್ಟು ದೊಡ್ಡ ಜನ ಸೇರಿಲ್ಲ. ನನ್ನ ವಿರುದ್ಧ ರಾಜಕಾರಣ ಮಾಡುವವರು ಇನ್ನೂ ಎದ್ದೇ ಇಲ್ಲಾ. ನನ್ನ ರಾಜಕೀಯ ವಿರೋಧಿ ಯಾರು ಅಂತ ತಯಾರೇ ಆಗಿಲ್ಲಾ. ನಮ್ಮ ರಾಜಕೀಯ ವಿರೋಧಿಗಳು ಜಾತ್ಯಾತೀತ ಜನತಾದಳ. ಕಮಲದ ಗುರುತಿಗೆ ಒಂದು ಲಕ್ಷ ಮತ ಹಾಕಿಸಿ ವಿಧಾನಸಭೆ ಕಳುಹಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ’ ಎಂದು ಪ್ರೀತಂಗೌಡ ಹೇಳಿದ್ದಾರೆ.
‘ಟಿಕೆಟ್ ತಗೊಳೋ ವಿಚಾರದಲ್ಲಿ ಅವರವರೇ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಬಸ್, ರೈಲ್ವೆ ಟಿಕೆಟ್ ತಗೊತಾರೋ ನೋಡೋಣ. ಇವತ್ತಿನ ರ್ಯಾಲಿ ನೋಡಿ ಹೇಮಾವತಿ ನಗರದವರು ಹಾಗೂ ಹೊಳೆನರಸೀಪುರದವರು ಒಂದು ತೀರ್ಮಾನಕ್ಕೆ ಬಂದಿರ್ತಾರೆ. ನನಗೆ ಟಿಕೆಟ್ ಕೊಡದಿದ್ದರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಿರ್ತಾರೆ. ಅವರಿಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ. ಕಾಂಗ್ರೆಸ್ ಅಭ್ಯರ್ಥಿ ಆಗ್ತೀನಿ ಒಬ್ಬರು ಬಂದಿದ್ದಾರೆ. ಅವರಿಗೆ ಠೇವಣಿಗೂ ಬರಲ್ಲ. ಕಳೆದ ಭಾರಿ ಸೋತ ಕಾಂಗ್ರೆಸ್ ಅಭ್ಯರ್ಥಿ ಯಾವ ಪಕ್ಷದಲ್ಲಿರುತ್ತಾರೋ ಗೊತ್ತಿಲ್ಲ ಎಂದು ಪ್ರೀತಂಗೌಡ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
‘ಕುಟುಂಬದ ಹಿಡಿತದಿಂದ ಈ ಜಿಲ್ಲೆ ನರಳುತ್ತಿದೆ. ಕುಟುಂಬದ ಹಿಡಿತದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ತರಲು ಬಿಜೆಪಿ ಗೆಲ್ಲಿಸಿ. ಜಿಲ್ಲೆಯ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಟಿಕೆಟ್ ತಗೊಳ್ಳಲು ಎರಡು ತಿಂಗಳಿನಿಂದ ಪ್ರಯತ್ನ ಪಡ್ತಿದ್ದಾರೆ. ಅದು ಬಸ್ ಟಿಕೆಟ್, ಟ್ರೈನ್ ಟಿಕೆಟ್ ಆಗಿರುತ್ತೆ ಹೊರತು ಎಂಎಲ್‌ಎ ಆಗುವ ಟಿಕೆಟ್ ಅಲ್ಲಾ’ ಎಂದು ಜೆಡಿಎಸ್ ನಾಯಕರನ್ನು ಪ್ರೀತಂ ಗೌಡ ಕುಟುಕಿದ್ದಾರೆ.
ಡಿಕೆಶಿಯನ್ನು ಭೇಟಿ ಮಾಡಿದ ಯೋಗೇಶ್ ಬಾಬು: ಕಾಂಗ್ರೆಸ್ ಸೇರ್ತಾರಾ ರೆಬೆಲ್ ನಾಯಕ..?
‘ಸಂವಿಧಾನ ಜಾರಿಗೆ ಬರದಿದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ’