Friday, November 14, 2025

Latest Posts

‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’

- Advertisement -

ಹಾಸನ: ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು ಪ್ರಚಾರ ಪ್ರಾರಂಭಿಸಿದ್ದಾರೆ. ಸಮಾವೇಶ, ಮೆರವಣಿಗೆ, ಹಲವು ಏರಿಯಾಗಳಿಗೆ ಭೇಟಿ ನೀಡುವ ಮೂಲಕ, ಈಗಿಂದಲೇ ಸಣ್ಣಗೆ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ. ಅದೇ ರೀತಿ ಶಾಸಕ ಪ್ರೀತಂಗೌಡ ಕೂಡ, ಹಾಸನದ ಕೆಲವು ಏರಿಯಾಗಳಿಗೆ ಹೋಗಿ, ಓಟ್ ಕೇಳುತ್ತಿದ್ದಾರೆ.

ಪರಿಹಾರಕ್ಕಾಗಿ ರಸ್ತೆಯಲ್ಲಿ ಶವ ಇಟ್ಟುಕೊಂಡು ಪ್ರತಿಭಟನೆ ..

ಹಾಸನದ ಶ್ರೀನಗರದಲ್ಲಿ ಮತಬೇಟೆಯಾಡಿದ ಪ್ರೀತಂ, ನಾನು ಕೆಲಸ ಮಾಡಿದಿನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು, ಇಲ್ಲದಿದ್ರೆ, ನಾನು ಈ ಕಡೆ ತಿರುಗಿಯೂ ನೋಡಲ್ಲಾ ಎಂದಿದ್ದಾರೆ.  ಮತ ಹಾಕದಿದ್ರೆ ನಾನು ನಿಮ್ಗೆ ಕೈ ನೂ ಕೊಡ್ತಿನಿ.. ಕಾಲ್ನು ಕೊಡ್ತಿನಿ ಅಂತಾ ಹೇಳಿರುವ ಪ್ರೀತಂಗೌಡ, ಕೆಲ್ಸ ಮಾಡಿದ್ದೀನಿ ಮತ ಹಾಕದಿದ್ರೆ ನನಗೂ ಉರಿ ಹತ್ತುತ್ತೆ. ಏನಮ್ಮಾ ನೀನು ಕೂಲಿ ಕೆಲಸಕ್ಕೆ ಹೋಗ್ತಿಯಾ, ನಿನಗೆ ಕೂಲಿ ಕೊಡದಿದ್ರೆ, ಸುಮ್ನಿರ್ತಿಯಾ..? ನನಗೂ ಹಾಗೆ, ನಾನು ಎಷ್ಟು ಕೆಲಸ ಮಾಡಿದ್ರೂ ನೀವು ನನಗೆ ಓಟ್ ಹಾಕದಿದ್ರೆ, ಇವರಿಗೆ ಎಷ್ಟ್ ಮಾಡಿದ್ರೂ ಅಷ್ಟೇ ಅಂತಾ ನಾನು ಇನ್ಯಾವತ್ತು ತಿರುಗಿಯೂ ನೋಡಲ್ಲಾ ಎಂದು ಪ್ರೀತಂ ಹೇಳಿದ್ದಾರೆ.

‘ಕಾಫಿಬೆಳೆಗಾರರಿಗೆ ಹೊಸವರ್ಷಕ್ಕೆ ಬಿಜೆಪಿ ಸರ್ಕಾರ ಉಡುಗೊರೆ ನೀಡಲಿದೆ’

3 ಭಾರಿ ಕೈ ಕೊಟ್ಟಿದ್ದೀರ ಈ ಭಾರಿ ಕೈ ಕೊಟ್ರೆ ಈ ಕಡೆ ತಿರುಗಿ ನೊಡಲ್ಲ. ದಳ, ಕಾಂಗ್ರೆಸ್ನವರು ಬಂದ್ರು ಅಂತಾ ಹಿಂದೆ ಹೋದ್ರೆ ನಮ್ಮ ಹುಡುಗ್ರು ನನಗೆ ಹೇಳ್ತಾರೆ. ಜೆಡಿಎಸ್ ನವರು ಒಮ್ಮೆಯಾದ್ರೂ ನಿಮ್ಮ ಏರಿಯಾಗೆ ಬಂದಿದ್ದಾರಾ? ಈ ಭಾರಿ ನನಗೆ ಮತ ಹಾಕದಿದ್ರೆ ನಾನು ಯಾವುದೇ ಕೆಲಸ ಮಾಡಿಕೊಡಲ್ಲ ಎಂದು ಪ್ರೀತಂ ಹೇಳಿದ್ದಾರೆ.

- Advertisement -

Latest Posts

Don't Miss