ಹರಿಪ್ರಸಾದ್ ಅವರು ಮಾತಾಡಂಗಿದ್ರೆ ಮಾತಾಡ್ಲಿ- ಶಾಸಕ ಪ್ರೀತಂಗೌಡ

Political news:

ಬಿ.ಕೆ.ಹರಿಪ್ರಸಾದ್ ಅವಾಚ್ಯ ಶಬ್ದ ಬಳಕೆ ವಿಚಾರ ಹಾಸನದಲ್ಲಿ ಜೆಡಿಎಸ್ ವಿರುದ್ದ ಬಿಜೆಪಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯಿಸಿದ್ದಾರೆ. ನಾನು ಬಿ.ಕೆ.ಹರಿಪ್ರಸಾದ್‌ಗೆ ವಕ್ತಾರನಾಗಿ ಮಾತನಾಡಲ್ಲ, ಅವರು ಬಹಳ ಹಿರಿಯರು, ದೆಹಲಿಯಲ್ಲಿ, ಬೆಂಗಳೂರಿನಲ್ಲಿ ರಾಜಕಾರಣ ಮಾಡ್ದೋರು. ಈಗ ಚಿಕ್ಕ ಚಿಕ್ಕ ವಿಚಾರಕ್ಕೂ‌ ಮಾತನಾಡುವಂತದ್ದು ಆಗಿದೆ. ಇದು ಅವರ ಹತಾಶ ಭಾವನೆ ತೋರಿಸುತ್ತೆ, ನಾವು ದೊಡ್ಡವರ ಬಗ್ಗೆ ಕಮೆಂಟ್ಸ್ ಮಾಡಬಾರದು. ನಮ್ಮ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸವನ್ನು ಮಾಡ್ಬೇಕು.

ಚುನಾವಣೆ ಮುಗಿದ ನಂತರ ರಾಜ್ಯದಿಂದ ಏನು ಜವಾಬ್ದಾರಿ ಬರುತ್ತೆ ಆಮೇಲೆ ರಾಜ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು.ಇಂಥ ವಿಷಯಕ್ಕೆ ಪ್ರತಿಕ್ರಿಯೆ ಕೊಡಬೇಕು ಅಂತ ಸಂವಿಧಾನದಲ್ಲಿ ರೂಲ್ಸ್ ಏನಾದ್ರು ಇದಿಯಾ, ಈ ತರ ಅವರು ಮಾತನಾಡಿದ್ದಕ್ಕೆ ರೆಸ್ಪಾನ್ಸ್ ಮಾಡಬೇಕು ಅಂತ ಕಾನೂನು ಇದ್ದರೆ ಪಾಲನೆ ಮಾಡ್ತಿವಿ,ಯಾವಾಗ ಏನ್ ಮಾತಾಡಬೇಕು, ಏನ್ ಮಾತನಾಡಬಾರದು ಎಂಬುದು ನಮ್ಮ ಭಾರತೀಯ ಜನತಾ ಪಾರ್ಟಿಗೆ ಬಿಟ್ಟ ವಿಚಾರ, ಹರಿಪ್ರಸಾದ್ ಅವರು ಯಾಕೆ ತಲೆಕೆಡಿಸಿಕೊಳ್ಳಬೇಕು. ಹರಿಪ್ರಸಾದ್ ಅವರು ಮಾತಾಡಂಗಿದ್ರೆ ಮಾತಾಡ್ಲಿ ಎಂದಿದ್ದಾರೆ.

About The Author