Political News: ಉತ್ತರಪ್ರದೇಶದ ಅಲಾಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಮಹಾಪೂರ್ಣ ಕುಂಭಮೇಳ ನಡೆಯುತ್ತಿದ್ದು, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.
ಇಂದು ಪ್ರಯಾಗರಾಜ್‌ಗೆ ಆಗಮಿಸಿದ್ದ ದ್ರೌಪದಿ ಮುರ್ಮುರನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಸ್ವಾಗತಿಸಿದರು. ಬಳಿಕ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿದರು.
144 ವರ್ಷಕ್ಕೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗಿಯಾಗಲೇಬೇಕೆಂದು 40ಕೋಟಿಗೂ ಹೆಚ್ಚು ಜನ ಈಗಾಗಲೇ ಕುಂಭ ಮೇಳಕ್ಕೆ ಬಂದು ಹೋಗಿದ್ದಾರೆ. ಇನ್ನು ಬರುತ್ತಲೇ ಇದ್ದಾರೆ. ಶಿವರಾತ್ರಿಯ ತನಕವೂ ಜನರಿಗೆ ಅಮೃತಸ್ನಾನದಲ್ಲಿ ಭಾಗವಹಿಸುವ ಅವಕಾಶವಿದೆ. ಬರೀ ಭಾರತದವರಷ್ಟೇ ಅಲ್ಲದೇ, ವಿದೇಶಿಗರು ಕೂಡ ಈ ಕುಂಭ ಮೇಳದಲ್ಲಿ ಭಾಗವಹಿಸಿ, ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ದಂಪತಿ ಸಮೇತರಾಗಿ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ಮೊದಲು ಅವರ ಮಗಳು ಐಶ್ವರ್ಯಾ ಕೂಡ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದು, ಬಾಲಿವುಡ್ ಸೆಲೆಬ್ರಿಟಿಗಳು, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿ ಹಲವು ಶ್ರೀಮಂತ ಉದ್ಯಮಿಗಳು ಕೂಡ ಮಹಾಕುಂಭ ಮೇಳಕ್ಕೆ ಬಂದು ಪುನೀತರಾಗಿದ್ದಾರೆ.