Sunday, September 15, 2024

Latest Posts

Hubballi : ಪತ್ರಿಕಾ ವಿತರಕರ ದಿನಾಚರಣೆ: ವಿ.ಎಸ್.ವಿ ಪ್ರಸಾದ, ಆನಂದ ಸಂಕೇಶ್ವರ, ಶಾಸಕ ಟೆಂಗಿನಕಾಯಿ ಚಾಲನೆ..!

- Advertisement -

ಹುಬ್ಬಳ್ಳಿ: ಪತ್ರಿಕೋದ್ಯಮ ವಿಭಾಗದಲ್ಲಿಯೇ ಪತ್ರಿಕಾ ವಿತರಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ದಿನಾಚರಣೆಗೆ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ವಿ.ಎಸ್.ವಿ ಪ್ರಸಾದ, ವಿ.ಆರ್.ಎಲ್ ಮುಖ್ಯಸ್ಥರಾದ ಆನಂದ ಸಂಕೇಶ್ವರ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಿತ್ಯ ನಸುಕಿನಲ್ಲೇ ಎದ್ದು, ಮಳೆ, ಚಳಿ ಲೆಕ್ಕಿಸದೆ ದುಡಿಯುವ ಕಾಯಕ ಜೀವಿಗಳು ಪತ್ರಿಕಾ ವಿತರಕರು. ಸೂರ್ಯೋದಯಕ್ಕೆ ಮೊದಲು ದಿನಪತ್ರಿಕೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸುತ್ತಾರೆ. ಇಂತಹ ಸೇನಾನಿಗಳಿಗೆ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ದ್ವಿಚಕ್ರ ವಾಹನ ಖರೀದಿಗೆ ಆರ್ಥಿಕ ನೆರವು, ಬಡ್ಡಿರಹಿತ ಸಾಲ ಸೇರಿ ನಾನಾ ಸವಲತ್ತುಗಳನ್ನು ಒದಗಿಸಬೇಕೆಂಬ ಒತ್ತಾಯ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ ಪ್ರತಿವರ್ಷ ಪತ್ರಿಕಾ ವಿತರಕರ ದಿನಾಚರಣೆ ವೇಳೆ ಇದು ಸದ್ದು ಮಾಡುತ್ತದೆಯಾದರೂ ನಂತರ ಮರೆತೇ ಹೋಗುತ್ತದೆ.

ಸರ್ಕಾರದಿಂದ ಸ್ಥಾಪನೆಯಾಗಿರುವ ಪತ್ರಿಕಾ ವಿತರಕರ ಕಲ್ಯಾಣ ನಿಧಿಯ ನೆರವು ಸೇರಿ ಅನೇಕ ಬೇಡಿಕೆಗಳಿಗೆ ವಿತರಕರ ಆಗ್ರಹವಿದೆ. ಇವೆಲ್ಲದವರ ನಡುವೆಯೂ ತಮ್ಮ ಬದುಕಿನ ಅನುಭವಗಳನ್ನು ಕೆಲವು ಹಿರಿಯ ಪತ್ರಿಕಾ ವಿತರಕರು ಇಲ್ಲಿ ಮಂಡಿಸಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ಡಾ.ಸಿ.ಎಚ್. ವಿ.ಎಸ್.ವಿ ಪ್ರಸಾದ ನಿಜಕ್ಕೂ ಪತ್ರಿಕಾ ವಿತರಕರ ಕಾರ್ಯ ಮೆಚ್ಚುವಂತದ್ದು, ಈ ನಿಟ್ಟಿನಲ್ಲಿ ಒಂದು ಇಲೆಕ್ಟ್ರಿಕಲ್ ದ್ವಿಚಕ್ರ ವಾಹನ ವಿತರಣೆ ಮಾಡುವುದಾಗಿ ಹೇಳಿದರು.ಒಟ್ಟಿನಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಅದ್ದೂರಿಯಾಗಿ ನಡೆದಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಇಂತಹದೊಂದು ಕಾರ್ಯಕ್ರಮ ಶ್ರಮ ಜೀವಿಗಳ ಕಾರ್ಯವನ್ನು ಕೊಂಡಾಡಿರುವುದು ನಿಜಕ್ಕೂ ವಿಶೇಷವಾಗಿದೆ.

- Advertisement -

Latest Posts

Don't Miss