Thursday, December 4, 2025

Latest Posts

ಕುರುಬ ಸಮಾಜದ ಹಣ ದುರುಪಯೋಗ: ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಲು ಕೇಶವಮೂರ್ತಿ ಆಗ್ರಹ

- Advertisement -

ಹಾಸನ : ಸಮಾಜಕ್ಕೆ ಆಸರೆ ಆಗಬೇಕಾದವರು ಸಮಾಜದ ಹಣವನ್ನೇ ದುರುಪಯೋಗ ಮಾಡಿಕೊಳ್ಳಲಾಗಿರುವುದು ಖಂಡನೀಯವಾಗಿದ್ದು, ಕುರುಬರ ಜಿಲ್ಲಾ ಸಂಘದಲ್ಲಿ ಆಗಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೆಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕೆ.ಬಿ. ಕೇಶವಮೂರ್ತಿ ಆಗ್ರಹಿಸಿದರು.

​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡುತ್ತಾ, ಜಿಲ್ಲಾ ಕುರುಬರ ಸಂಘದಲ್ಲಿ ಹಣ ದುರ್ಬಳಕೆ, ಬೈಲಾ ನಿಯಮಾವಳಿ ಪ್ರಕಾರ ಕಡತ ವಿಲೇವಾರಿ ಮಾಡುವುದರಲ್ಲಿ ಲೋಪ ಎಸಗಿರುವುದು, ಸಕಾಲಕ್ಕೆ ಸಂಘದ ಸಭೆ ನಡೆಸದಿರುವುದು, ವಿಚಾರಣೆ ವೇಳೆ ಬಹಿರಂಗ ಆಗಿರುವುದರಿಂದ ಜಿಲ್ಲಾ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವುದು ಸೂಕ್ತ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರೇ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಲು ನೀವು ಮಾಡುವ ಈ 5 ತಪ್ಪುಗಳೇ ಕಾರಣ..

ಜಿಲ್ಲಾ ಸಂಘದಲ್ಲಿ ಆಗಿರುವ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸಮುದಾಯದ ಹಣ ದುರ್ಬಳಕೆಯಾಗಿರುವುದನ್ನು ಸರಿಪಡಿಸಬೇಕು ಮತ್ತು ಎಲ್ಲವೂ ಸರಿ ಆಗುವವರೆಗೆ ಆಡಳಿತಾಧಿಕಾರಿ ನೇಮಿಸಬೇಕೆಂದು ನಾನು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಳೆದ ಜುಲೈ ೧೮ ರಂದು ಪತ್ರ ಬರೆದಿದ್ದೆನು. ನನ್ನ ದೂರು ಆಧರಿಸಿ ತನಿಖೆ ನಡೆಸಿದ ಉಪ ನಿಬಂಧಕರು, ಜಿಲ್ಲಾ ಸಂಘದಲ್ಲಿ ಅಕ್ರಮ ಮತ್ತು ಕರ್ತವ್ಯ ಲೋಪ ನಡೆದಿದೆ ಎಂಬುದನ್ನು ಖಾತ್ರಿ ಪಡಿಸಿದ್ದಾರೆ.

ಒಂದಲ್ಲ, ಎರಡಲ್ಲ ಸಂಘದ ಬೈಲಾ ಪುಸ್ತಕವೇ ಇಲ್ಲದಿರುವುದು, ಲೆಕ್ಕಪತ್ರ ನೀಡದೇ ಇರುವುದು ಸೇರಿದಂತೆ ಒಟ್ಟು ೮ ಆರೋಪಗಳನ್ನು ಪಟ್ಟಿ ಮಾಡಿ ಲೋಪಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಉಪ ನಿಬಂಧಕರ ವರದಿ ಆಧರಿಸಿ ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ನಾಹೀದ್ ಅಂಜುಂ ಅವರು ಹಾಲಿ ಅಧ್ಯಕ್ಷರಾಗಿರುವ ಪಟೇಲ್ ಶಿವಪ್ಪ ಅವರಿಗೆ ನೋಟಿಸ್ ಸಹ ಜಾರಿ ಮಾಡಲಾಗಿದೆ. ಆದರೂ ಪಟೇಲ್ ಶಿವಪ್ಪ ಅವರು, ತಮ್ಮ ಹುಳುಕು ಮುಚ್ಚಿಕೊಳ್ಳಲು ಏನೂ ನಡೆದೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ನಿಮ್ಮ ಲಕ್ ಬದಲಾಗುವ ಸಂದರ್ಭದಲ್ಲಿ ಇಂಥ ಸೂಚನೆಗಳನ್ನು ಕಾಗೆ ನೀಡುತ್ತೆ ..

ಶಿವಪ್ಪ ಅವರು ಹೇಳಿಕೆ ನೀಡಿದ್ದು, ಕೇಶವಮೂರ್ತಿ ಅವರು ಕುರುಬರ ಸಂಘದ ನಿರ್ದೇಶಕರೇ ಅಲ್ಲ, ಉಚ್ಚಾಟನೆ ಮಾಡಲಾಗಿದೆ ಎಂದಿದ್ದಾರೆ. ಇವೆಲ್ಲಾವನ್ನು ಅಲ್ಲದೆ ಪ್ರಭಾವಿ ವ್ಯಕ್ತಿಗಳು ಇವರ ಹಿಂದೆ ನಿಂತು ನನ್ನ ವಿರುದ್ಧ ಆರೋಪ ಮಾಡುತ್ತಿದ್ದು, ಅದನ್ನು ಬಹಿರಂಗ ಪಡಿಸುವೆ ಎಂದು ಸವಾಲು ಹಾಕಿದ್ದಾರೆ. ಯಾರಿದ್ದಾರೆ ಎಂಬುದನ್ನು ಅವರು ಬಹಿರಂಗ ಪಡಿಸಲಿ, ಅವರ ಸವಾಲನ್ನು ನಾನು ಸ್ವೀಕಾರ ಮಾಡಲು ಸಿದ್ಧನಿದ್ದೇನೆ ಎಂದರು.

ಜಿಲ್ಲಾ ಕುರುಬರ ಸಂಘಕ್ಕೆ ಯಾರಾರು ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ ಎಂಬುದನ್ನು ನಾನು ಬಹಿರಂಗ ಪಡಿಸುವೆ. ಶಿವಪ್ಪ ಅವರ ಹುಳುಕುಗಳನ್ನು ಬಯಲು ಮಾಡಿರುವ ಅಧಿಕಾರಿಗಳ ವಿರುದ್ಧ ವೃಥಾ ಆರೋಪ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಶಿವಪ್ಪ ಅವರಾಗೆ ಕುರುಬರ ಸಂಘದಿಂದ ಜೀವನವನ್ನು ನಾನು ಸಾಗಿಸುತ್ತಿಲ್ಲ. ಇವರ ಅಕ್ರಮ ಬಹಿರಂಗ ಮಾಡಿದರು ಎಂಬ ಒಂದೇ ಕಾರಣಕ್ಕೆ ಅವರನ್ನು ದೂರುತ್ತಿರುವುದು ಸರಿಯಲ್ಲ. ನನ್ನ ವಿರುದ್ಧ ಸುದ್ದಿಗೋಷ್ಟಿ ನಡೆಸಿ ಸುಳ್ಳು ಆರೋಪ ಮಾಡುತ್ತಿರುವ ಶಿವಪ್ಪ ಅವರು, ಮೊದಲು ಒಂದಲ್ಲ, ಎರಡು ನೋಟಿಸ್ ಜಾರಿಯಾಗಿರುವುದಕ್ಕೆ ಮೊದಲು ಉತ್ತರ ನೀಡಲಿ ಎಂದು ಕೋರುತ್ತೇನೆ ಎಂದು ಹೇಳಿದರು.

ಸಮಾಜಕ್ಕೆ ಆಸರೆಯಾಗಬೇಕಿದ್ದ ನೀವು, ಸಮಾಜದ ಹಣವನ್ನೇ ದುರುಪಯೋಗ ಮಾಡಿರುವುದು ಖಂಡನೀಯ. ನಿಮಗೆ ಬದ್ಧತೆ ಇದ್ದರೆ ಮೊದಲು ನೋಟಿಸ್ಗೆ ಉತ್ತರ ನೀಡಿ, ನಂತರ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕುರುಬರ ಸಂಘದ ಪ್ರಸನ್ನಕುಮಾರ್, ಅನೀಲ್ ಕುಮಾರ್, ಮಂಜಣ್ಣ, ಗಿರೀಶ್ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss