Sunday, July 6, 2025

Latest Posts

ಮಂಡ್ಯ ವಿಧಾನಸಭಾ ಕ್ಷೇತ್ರದ ಸಂಪೂರ್ಣ ವಿವರ..

- Advertisement -

ಮಂಡ್ಯ:  2023ರ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ, ಮಂಡ್ಯ ಚುನಾವಣಾಧಿಕಾರಿ ಹೆಚ್.ಎಸ್.ಕೀರ್ತನ ಸುದ್ದಿಗೋಷ್ಟಿ ನಡೆಸಿದರು. ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಸಿದ್ದತೆ ನಡೆಯುತ್ತಿದೆ. ನಾಳೆಯಿಂದ ಏ.20ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಏ.21 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು. ನಾಮಪತ್ರ ಹಿಂಪಡೆಯಲು ಏ.24 ರಂದು ಪಡೆಯಬಹುದು. ಮೇ 10ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತದೆ ಮೇ 13ಕ್ಕೆ ಏಣಿಕೆ ಕಾರ್ಯ ನಡೆಯುತ್ತದೆ ಎಂದಿದ್ದಾರೆ.

ಮಂಡ್ಯ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 254.

ಮಂಡ್ಯ ಕ್ಷೇತ್ರದಲ್ಲಿ ಒಟ್ಟು ಮತದಾರರು 216494.

ಪುರುಷ ಮತದಾರರ ಸಂಖ್ಯೆ-106122.

ಮಹಿಳಾ ಮತದಾರರ ಸಂಖ್ಯೆ-110339.

ತೃತೀಯಲಿಂಗಿ ಮತದಾರರ ಸಂಖ್ಯೆ-33.

ಸೂಕ್ಷ್ಮ-ಅತೀಸೂಕ್ಷ್ಮ ಮತಗಟ್ಟೆಗಳು 55.

ಎಲ್ಲಾ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸೌಲಭ್ಯ ವ್ಯವಸ್ಥೆಯೂ ಇದೆ. 254 ಮತಗಟ್ಟೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೊಸ ಮತದಾರರ ಸಂಖ್ಯೆ 2421 ಜನರು 2023 ರ ಚುನಾವಣೆಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಲ್ಲರು ಸಹ ಕಡ್ಡಾಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಕೀರ್ತನ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಗೆದ್ದರೆ ಯಾರು ಸಿಎಂ ಆಗ್ತಾರೆ ಅನ್ನೋ ಪ್ರಶ್ನೆಗೆ ವಿಜಯೇಂದ್ರ ಹೇಳಿದ್ದು ಹೀಗೆ..

‘ನನಗಷ್ಟೇ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಕಾರಣವೇನಂದ್ರೆ..’

‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’

- Advertisement -

Latest Posts

Don't Miss