Political News: ಇಂದು ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಂಭರ್ಮದಿಂದ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ, ತೆಲಂಗಾಣ, ಹೈದರಾಬಾದ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದರೆ, ಉತ್ತರ ಭಾರತೀಯರು ಬೀಹು, ಲೋರಿ ಎಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.
ಹಾಗಾಗಿ ಪ್ರಧಾನನಿ ನರೇಂದ್ರ ಮೋದಿ ದೇಶದ ಎಲ್ಲ ಜನರಿಗೂ ತಮ್ಮದೇ ರೀತಿಯಲ್ಲಿ ವಿಶ್ ಮಾಡಿದ್ದು, ಕನ್ನಡಿಗರಿಗೆ, ಕನ್ನಡದಲ್ಲೇ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ, ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ಹಾರೈಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ ಎಂದು ಪ್ರಧಾನಿ ಮೋದಿ ಸಂಕ್ರಾಂತಿ ಶುಭಾಶಯ ಕೋರಿದ್ದಾರೆ.
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಅತ್ಯಂತ ಸಂತೋಷ ಮತ್ತು ಸಮೃದ್ಧ ಮಕರ ಸಂಕ್ರಾಂತಿಯ ಶುಭಾಶಯಗಳು. ಈ ಹಬ್ಬವು ಸಮೃದ್ಧವಾದ ಸುಗ್ಗಿಯನ್ನು ತರಲಿ ಮತ್ತು ಮುಂದೆ ಪ್ರಕಾಶಮಾನವಾದ ದಿನಗಳನ್ನು ತರಲಿ ಎಂದು ಸಚಿವೆ ವಿಶ್ ಮಾಡಿದ್ದಾರೆ.
ಸಂಕ್ರಾಂತಿಯ ಶುಭಾಶಯಗಳು. pic.twitter.com/6F3gZT7qmD
— Narendra Modi (@narendramodi) January 15, 2024
ಎಲ್ಲರಿಗೂ ಅತ್ಯಂತ ಸಂತೋಷ ಮತ್ತು ಸಮೃದ್ಧ ಮಕರ ಸಂಕ್ರಾಂತಿಯ ಶುಭಾಶಯಗಳು. ಈ ಹಬ್ಬವು ಸಮೃದ್ಧವಾದ ಸುಗ್ಗಿಯನ್ನು ತರಲಿ ಮತ್ತು ಮುಂದೆ ಪ್ರಕಾಶಮಾನವಾದ ದಿನಗಳನ್ನು ತರಲಿ.
— Nirmala Sitharaman (@nsitharaman) January 15, 2024
ಲೋಕಸಭೆ ಎಲೆಕ್ಷನ್‌ಗಾಗಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ ಬಿಜೆಪಿ
‘ನಾನು ಮೋದಿ ವಿರೋಧಿ ಎಂದು 3 ಪಕ್ಷಗಳು ನನಗೆ ಟಿಕೇಟ್ ಕೊಡಲು ಮುಂದಾಗಿದೆ. ಆದರೆ…’




