Tuesday, April 15, 2025

Latest Posts

ಕನ್ನಡದ ಕಂದಮ್ಮನ ಕಲೆಗೆ ಭೇಷ್ ಎಂದ ಪ್ರಧಾನಿ ಮೋದಿ..

- Advertisement -

ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮ ಅಮ್ಮ ಹಾಡುತ್ತಿದ್ದ ಭಾವ ಗೀತೆಗೆ, ಪಿಯಾನೋ ನುಡಿಸುವ ವೀಡಿಯೋ ಸಖತ್ ವೈರಲ್ ಆಗಿದೆ. ಈಕೆಯನ್ನ ಎಲ್ಲೋ ನೋಡಿದ ನೆನಪು ಕೆಲವರಿಗಿದೆ. ಆದ್ರೆ ಈಕೆಯ ಹೆಸರು ಹಲವರಿಗೆ ಗೊತ್ತಿಲ್ಲ. ಹಾಗಾಗಿ ಈ ಪುಟ್ಟ ಕಂದಮ್ಮ ಯಾರೆಂದು ಗೊತ್ತಿಲ್ಲ. ಆದರೆ ಈಕೆಯ ಟ್ಯಾಲೆಂಟ್ ಮೆಚ್ಚುವಂಥದ್ದು, ಎಷ್ಟು ಉತ್ತಮ ಸಂಸ್ಕಾರವಂತೆ ಎಂದು ಈಕೆಯನ್ನ ಹೊಗಳಿದ್ದಾರೆ.

ಈ ಪುಟ್ಟ ಮಗುವಿನ ಹೆಸರು ಶಾಲ್ಮಲಿ. ಕೆಲ ತಿಂಗಳ ಹಿಂದೆ ಈಕೆಯ ಮೊದಲ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾಮಮಂತ್ರವ ಜಪಿಸೋ ಓ ಮನುಜ ಎಂಬ ಹಾಡನ್ನ ಸುಮಧುರವಾಗಿ ಈಕೆ ಹಾಡಿದ್ದಳು. ಇದೀಗ ಪಲ್ಲವಗಳ ಪಲ್ಲವಿಯಲಿ ಎಂಬ ಹಾಡಿಗೆ, ಪಿಯಾನೋ ನುಡಿಸಿದ್ದಾಳೆ. ಈ ವೀಡಿಯೋ ಟ್ವೀಟರ್‌ನಲ್ಲೂ ಟ್ರೆಂಡ್ ಆಗುತ್ತಿದೆ.

ಪ್ರಧಾನಿ ಮೋದಿ ಸಹ ಈಕೆಯ ವೀಡಿಯೋ ಶೇರ್ ಮಾಡಿದ್ದು, ಈ ವೀಡಿಯೋ ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಸೃಜನಶೀಲತೆ. ಶಾಲ್ಮಲಿಗೆ ಬೆಸ್ಟ್ ವಿಶಸ್ ಎಂದು ಬರೆದಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಕೆಲವರು ಸೂಪರ್‌ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕರ್ನಾಟಕ ಎಲೆಕ್ಷನ್ ಗೆಲ್ಲಲು ಈ ಕಸರತ್ತು ಎಂದಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನನ್ನರಸಿ ರಾಧೆ ಸಿರಿಯಲ್ ನಟಿ..

ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಸಿಎಂ- ಮಾಜಿ ಸಿಎಂ: ವೀಡಿಯೋ ವೈರಲ್

‘ಹಾಸನದ 7ಕ್ಕೆ 7 ಸ್ಥಾನ ಗೆದ್ದು, ಆ ಗೆಲುವನ್ನೇ ದೇವೇಗೌಡರ ಪಾದಕ್ಕೆ ಅರ್ಪಿಸಬೇಕು’

- Advertisement -

Latest Posts

Don't Miss