Political News: ಪ್ರಧಾನಿ ನರೇಂದ್ರ ಮೋದಿ, ಸಂಸದರ ಜೊತೆ ಸೇರಿ, ಸಂಸತ್ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದಾರೆ. ಸಂಸತ್ ಕ್ಯಾಂಟೀನ್‌ಗೆ ಆಗಮಿಸಿದ ಮೋದಿ, ಎಲ್ಲ ಸಂಸದರಿಗೂ ತಮ್ಮ ಜೊತೆ ಊಟಕ್ಕೆ ಬರಲು ಆಹ್ವಾನಿಸಿದಾಗ, ಎಲ್ಲ ಸಂಸದರು ಆಶ್ಚರ್ಯವಾಗಿದ್ದಾರೆ. ಯಾಕೆ ಆಶ್ಚರ್ಯವಾಗಿದ್ದಾರೆ ಅಂದ್ರೆ, ಬನ್ನಿ ನಿಮಗೆಲ್ಲರಿಗೂ ನಾನು ಶಿಕ್ಷೆ ವಿಧಿಸಲಿದ್ದೇನೆ ಎಂದು ಮೋದಿ ಕರೆದಿದ್ದಾರೆ.
ಮೋದಿಯ ಈ ಮಾತು ಕೇಳಿದ ಸಂಸದರು, ನಮಗ್ಯಾಕೆ ಮೋದಿ ಶಿಕ್ಷಿಸುತ್ತಾರೆ..? ನಾವೇನು ತಪ್ಪು ಮಾಡಿದ್ದೇವೆ ಎಂದು ಯೋಚಿಸುತ್ತಲೇ, ಮೋದಿ ಜೊತೆ ಹೋಗಿದ್ದಾರೆ. ಆದರೆ ಮೋದಿ ಸಂಸತ್ ಕ್ಯಾಂಟೀನ್‌ಗೆ ಎಲ್ಲ ಪಕ್ಷದ ಸಂಸದರನ್ನು ಕರೆದುಕೊಂಡು ಹೋಗಿ, ತಮ್ಮೊಂದಿಗೆ ಊಟಕ್ಕೆ ಆಹ್ವಾನಿಸಿದ್ದಾರೆ.
ಪ್ರಧಾನಿ ಮೋದಿ ಸಂಸದರಿಗೆ ಹೀಗೊಂದು ಸರ್ಪ್ರೈಸ್ ಕೊಟ್ಟು, ಊಟ ಮಾಡಿ, ಸಂಸದರೊಂದಿಗೆ ಹರಟೆ ಹೊಡೆದಿದ್ದಾರೆ. ಈ ಹರಟೆಯಲ್ಲಿ ಪ್ರಧಾನಿ ಮೋದಿ ಲೈಫ್‌ಸ್ಟೈಲ್ ಹೇಗಿರುತ್ತದೆ. ಅವರು ಎಷ್ಟು ಗಂಟೆಗೆ ಏಳುತ್ತಾರೆ..? ಮಲಗುತ್ತಾರೆ..? ತಮ್ಮ ಸಮಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಸಂಸದರು ಪ್ರಶ್ನಿಸಿದ್ದಾರೆ. ಅಲ್ಲದೇ, ಕೆಲ ಘಟನೆಗಳನ್ನೂ ಮೋದಿ, ಸಂಸದರೊಂದಿಗೆ ಮೆಲುಕು ಹಾಕಿದ್ದಾರೆ.
45 ನಿಮಿಷಗಳ ಕಾಲ ಈ ಲಂಚ್ ಪಾರ್ಟಿ ನಡೆದಿದ್ದು, ಅನ್ನ, ದಾಲ್, ಖಿಚಡಿ, ಎಳ್ಳಿನ ಲಡ್ಡು ಸೇರಿ ಹಲವು ವೆಜಿಟೇರಿಯನ್ ಖಾದ್ಯಗಳು ಊಟದಲ್ಲಿದ್ದವು. ಪಾಕಿಸ್ತಾನಕ್ಕೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅಂದಿನ ಪ್ರಧಾನಿ ನವಾಜ್ ಷರೀಫ್‌ರನ್ನು ಆಶ್ಚರ್ಯಗೊಳಿಸಿದ್ದರ ಬಗ್ಗೆ, ಮುಂದಿನ ವಾರ ಅಬುದಾಬಿಯಲ್ಲಿ ಉದ್ಘಾಟನೆಯಾಗಲಿರುವ ಪ್ರಥಮ ಹಿಂದೂ ದೇವಸ್ಥಾನದ ಬಗ್ಗೆ ಮೋದಿ ಮಾತನಾಡಿದ್ದಾರೆ.
Enjoyed a sumptuous lunch, made even better thanks to the company of Parliamentary colleagues from various parties and different parts of India. pic.twitter.com/6MWTOCDnPJ
— Narendra Modi (@narendramodi) February 9, 2024
ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್
Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು