Tuesday, September 23, 2025

Latest Posts

‘ಸಂವಿಧಾನ ಹಕ್ಕು ಕೊಟ್ಟಿದ್ದು ಪ್ರಧಾನಿ ಮೋದಿ. ಎಸ್ಸಿ ಎಸ್ಟಿ ಗೆ ಖೋಟಾ ಹಂಚಿಕೆ ಮಾಡಿದ್ದು ನಾವು’

- Advertisement -

Kolar News: ಕೋಲಾರ: ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು,  ಜಾತಿ ಗಣತಿಯ ಉದ್ದೇಶವೆ ಆಗಿರಲಿಲ್ಲ. ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಬಗ್ಗೆ ಇತ್ತು. ಸುಪ್ರೀಂಕೋರ್ಟ್ ನಲ್ಲಿ ಇದರ ಮೇಲೆ ಕೇಸ್ ಇದೆ. ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಕಾಣಿಕೆ ಏನೂ..? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಸಂವಿಧಾನ ಹಕ್ಕು ಕೊಟ್ಟಿದ್ದು ಪ್ರಧಾನಿ ಮೋದಿ. ಎಸ್ಸಿ ಎಸ್ಟಿ ಗೆ ಖೋಟಾ ಹಂಚಿಕೆ ಮಾಡಿದ್ದು ನಾವು. ಇದರಿಂದ ಅವರಿಗೆ 3500 ಸೀಟ್ ಹೆಚ್ಚುವರಿ ಸೀಟು ಲಭ್ಯವಾಗಿದೆ. ಸ್ವಾತಂತ್ರ್ಯ ಬಂದಮೇಲೆ ಬರಿ ಜಾತಿಗಳನ್ನು ಕಾಂಗ್ರೆಸ್ ನವ್ರು ಸೇರಿಸುತ್ತಾ, ಹೆಚ್ಚಿಗೆ ಮಾಡಿದ್ರು. 11300 ಕೋಟಿ ದಲಿತರ ಹಣವನ್ನು ಗ್ಯಾರಂಟಿ ಗೆ ಕೊಟ್ಟಿದ್ದಾರೆ ಎಂದು ತಮ್ಮ ಸರ್ಕಾರದ ಬಗ್ಗೆ ಬೊಮ್ಮಾಯಿ ಬ್ಯಾಟ್ ಬೀಸಿದ್ದಾರೆ .

ರಾಷ್ಟ್ರಪತಿ ವಿರುದ್ಧ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತಾಡ್ತಾರೆ. ಅತ್ಯಂತ ಹಿಂದುಳಿದ ವರ್ಗದವರು ಇದ್ದಾರೆ ಅವರಿಗೆ ನ್ಯಾಯ ಕೊಡಲಿ. ರಿಸರ್ವೇಶನ್ ಕೆಲವು ಜನರು ಮಾತ್ರ ಪಡೆಯುತ್ತಿದ್ದಾರೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಲಿ. ಕಾಂತರಾಜ್ ವರದಿ ಬಗ್ಗೆ ಚುನಾವಣೆ ಗಿಮಿಕ್ ಮಾಡ್ತಿದ್ದಾರೆ. ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

Latest Posts

Don't Miss