International News: ಪ್ರಧಾನಿ ಮೋದಿ ದುಬೈನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಇಸ್ರೇಲ್ ಅಧ್ಯಕ್ಷ ಐಸಾಕ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಸ್ರೇಲ್- ಹಮಾಸ್ ಯುದ್ಧದ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಇಸ್ರೇಲ್- ಪ್ಯಾಲೇಸ್ತಿನ್ ಸಮಸ್ಯೆಗೆ ತ್ವರಿತ ನಿರ್ಣಯವನ್ನು ಭಾರತ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ, ಕದನ ವಿರಾಮ ಏರ್ಪಟ್ಟು ಪ್ಯಾಲೇಸ್ತಿನ್ ಖೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದ್ದು, ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಈ ಮೊದಲು ಕೂಡ ಭಾರತ, ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ಶಾಂತಿಮಾತುಕತೆಗೆ ಒತ್ತಾಯಿಸಿದ್ದು, ಯುದ್ಧವನ್ನು ಖಂಡಿಸಿತ್ತು.
ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ರಾಕೇಟ್ ದಾಳಿ ಮಾಡಿ ಸಾವಿರಕ್ಕೂ ಹೆಚ್ಚು ಮಂದಿಯ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಕೂಡ ಗಾಜಾದ ಮೇಲೆ ದಾಳಿ ಮಾಡಿ, ಹಮಾಸ್ ಉಗ್ರರು ಮತ್ತು 13 ಸಾವಿರಕ್ಕೂ ಹೆಚ್ಚು ಪ್ಯಾಲೇಸ್ತಿನ್ ನಾಗರಿಕರ ನಾಶ ಮಾಡಿತ್ತು.
ಯುದ್ಧ ಪುನರಾರಂಭಗೊಂಡ ನಂತರವೂ ಗಾಜಾದಲ್ಲಿ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿದೆ. ಅಕ್ಟೋಬರ್‌ನಿಂದ ಶುರುವಾದ ಯುದ್ಧದಲ್ಲಿ ಇಲ್ಲಿತನಕ 1 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಧ್ವಂಸವಾಗಿದೆ ಎಂದು ವರದಿಯಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಇದನ್ನು ಪರಿಶೀಲಿಸಲಾಗಿದ್ದು, ಗಾಜಾದಲ್‌ಲಿ ವ್ಯಾಪಕ ಹಾನಿಯಾಗಿದೆ.
ಚೀನಾದಲ್ಲಿ H9N2 ಆರ್ಭಟ : ಕೇಂದ್ರ ಸರ್ಕಾರದಿಂದ ದೇಶಾದ್ಯಂತ ಮುನ್ನೆಚ್ಚರಿಕಾ ಕ್ರಮ
ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮ ಅಂತ್ಯ: ಮತ್ತೆ ಶುರುವಾಯ್ತು ಯುದ್ಧ
8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ




