ಪ್ರಧಾನಿ ನರೇಂದ್ರ ಮೋದಿಯವರಿಗೆ ಎಸ್ ಪಿ ಜಿ ಯಿಂದ ಸಾಕಷ್ಟು ಭದ್ರತಾ ವ್ಯವಸ್ಥೆ ಇರುತ್ತದೆ, ಆದರೆ ಇಂದು ನರೇಂದ್ರ ಮೋದಿಯವರು
ಪಂಜಾಬಿಗೆ ತೆರಳಿದ್ದ ವೇಳೆಯಲ್ಲಿ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಪಂಜಾಬಿನ ಫಿರೋಜಪುರಾ ಕ್ಕೆ ಇಂದು ನರೇಂದ್ರ ಮೋದಿಯವರು ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗಿರುತ್ತಾರೆ, ಜೊತೆಗೆ ಅನೇಕ ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿರುತ್ತಾರೆ, ಈ ವೇಳೆ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುವಾಗ ಮಳೆ ಸಾಕಷ್ಟು ಸುರಿಯುತ್ತಿರುತ್ತದೆ. ಈಗಾಗಿ ಹವಮಾನ ವೈಪರಿತ್ಯದಿಂದ ಅವರು ಎಲಿಕ್ಯಾಪ್ಟರ್ ನಲ್ಲಿ ದೆಹಲಿಗೆ ಹೋಗಲು ಸಾಧ್ಯವಾಗುವುದಿಲ್ಲ. 20 ನಿಮಿಷಗಳ ಕಾಲ ನರೇಂದ್ರ ಮೋದಿಯವರು ಏರ್ಪೋರ್ಟ್ ನಲ್ಲೇ ಕಾದು ಕುಳಿತುಕೊಳ್ಳುತ್ತಾರೆ.
ಈಗಾಗಿ ಅವರು ಕಾರಿನಲ್ಲಿ ಪ್ರಯಾಣ ಮಾಡಲು ತಾಂತ್ರಿಕ ಸಲಹೆಗಾರರು ಮಾಹಿತಿಯನ್ನು ನೀಡುತ್ತಾರೆ. ಪಂಜಾಬಿನ ಡಿಜಿಪಿ ಯವರೊಂದಿಗೆ ಮಾತನಾಡುತ್ತಾರೆ. ಡಿಜಿಪಿ ಯವರು ಕೆಲವು ಸುಲಭ ಮಾರ್ಗದ ಲೊಕೇಶನ್ಸ್ ಗಳನ್ನು ಅವರಿಗೆ ಕಳುಹಿಸಿಕೊಡುತ್ತಾರೆ. ಆದರೆ ನರೇಂದ್ರ ಮೋದಿಯವರು ಹೋಗುವ ದಾರಿಯಲ್ಲಿ ಪ್ರತಿಭಟನಾಕಾರರ ದಾರಿಯನ್ನು ತಡೆಯುತ್ತಾರೆ, ಈಗಾಗಿ ಪಂಜಾಬ್ ನ ಫ್ಲೆöÊಓವವರ್ ನಲ್ಲೇ ನರೇಂದ್ರ ಮೋದಿಯವರು ಒಂದು ಗಂಟೆಗಳಕಾಲ ಕಾದು ಕುಳಿತುಕೊಳ್ಳುತ್ತಾರೆ. ಇದಕ್ಕೆ ನರೇಂದ್ರ ಮೋದಿಯವರು ಬೇಸರ ವ್ಯಕ್ತಪಡಿಸಿದ್ದು, ಪರೋಕ್ಷವಾಗಿ ಪಂಜಾಬ್ ಮುಖ್ಯಮಂತ್ರಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ನಾನೂ ಇವತ್ತು ನಿಜಕ್ಕೂ ಪ್ರಾಣಾಪಾಯದಿಂದ ಬಚಾವ್ ಆಗಿ ಬಂದಿದ್ದೇನೆ ಎಂದಿದ್ದಾರೆ .
ಬಿ ಎಲ್ ಸಂತೋಷ್ ಆಕ್ರೋಷ ವ್ಯಕ್ತಪಡಿಸಿ ಇದು ಕಾಂಗ್ರೆಸ್ ಮಾಡಿರುವ ಎರಡನೇ ದೊಡ್ಡ ತಪ್ಪು ಎಂದು ಗುಡುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆಯಲ್ಲಿ ಲೋಪ
- Advertisement -
- Advertisement -