Thursday, November 13, 2025

Latest Posts

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಮೋದಿ

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ ಪ್ರವಾಸ ಮುಗಿಸಿಕೊಂಡು ಹಿಂದಿರುಗಿದ್ದಾರೆ. ದಿಲ್ಲಿಗೆ ಬಂದಿಳಿದ ತಕ್ಷಣವೇ ವಿಮಾನ ನಿಲ್ದಾಣದಿಂದ ನೇರವಾಗಿ ಲೋಕ ನಾಯಕ್‌ ಆಸ್ಪತ್ರೆಗೆ ತೆರಳಿದ್ದಾರೆ.

ದೆಹಲಿ ಕಾರು ಬಾಂಬ್‌ ಸ್ಪೋಟದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ್ದಾರೆ. ಯೋಗಕ್ಷೇಮ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದರು.

ಇದೇ ವೇಳೆ ದುಃಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಾವು ನಿಮ್ಮ ಜೊತೆ ಇದ್ದೇವೆ ಎಂಬ ಭರವಸೆ ತುಂಬಿದ್ದಾರೆ.

ಸ್ಫೋಟದ ಹಿಂದಿನ ರೂವಾರಿಗಳನ್ನ ಬಿಡೋದಿಲ್ಲ ಎಂದು, ನಿನ್ನೆಯಷ್ಟೇ ಭೂತಾನ್‌ನಿಂದಲೇ ಮೋದಿ ಎಚ್ಚರಿಕೆಯ ಸಂದೇಶ ರವಾನಿಸಿದ್ರು.

ಇದೀಗ ಭೂತಾನ್‌ನಿಂದ ಬರುತ್ತಿದ್ದಂತೆ ಗಾಯಾಳುಗಳನ್ನು ಭೇಟಿ ಮಾಡಿದ್ದು, ಧೈರ್ಯ ತುಂಬಿದ್ದಾರೆ.

- Advertisement -

Latest Posts

Don't Miss