ಹಾಸನ: ಹಾಸನದ ಕೆಡಿಪಿ ಸಭೆಯಲ್ಲಿ ವಾಗ್ವಾದ ನಡೆದಿದ್ದು, ಶಾಸಕ ಪ್ರೀತಂಗೌಡ – ಮಾಜಿ ಸಚಿವ ರೇವಣ್ಣ ಟಾಕ್ ಫೈಟ್ ಮಾಡಿದ್ದಾರೆ. ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿ ವಿಚಾರದ ಬಗ್ಗೆ ಮಾತಾಡುವಾಗ ವಾಗ್ವಾದ ಶುರುವಾಗಿದ್ದು, ಕೆರೆಗೆ ಅಭಿವೃದ್ಧಿಗೆ 144.ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಯೋಜನೆ ಆಗಿತ್ತು. ಈ ಯೋಜನೆ ಬದಲಾಯಿಸಲಾಗಿದೆ ಎಂದು ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೈಲಿನ ಖೈದಿಗಳ ಹಕ್ಕಿನ ಬಗ್ಗೆ ವಿವಿಧ ಜಾಗೃತಿ ಕಾರ್ಯಕ್ರಮ: ನ್ಯಾ. ಬಿ.ಜಿ.ರಮಾ
ಆದರೆ ಸಂಪುಟ ಸಭೆಯಲ್ಲಿ ತೀರ್ಮಾನ ಆದಂತೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರೀತಂಗೌಡ ತಿರುಗೇಟು ನೀಡಿದ್ದಾರೆ. ಈ ವೇಳೆ ಈ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ರೇವಣ್ಣ ಹೇಳಿದರು. ಈ ವೇಳೆ ಹಳೆಬೀಡು ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ವಾ..? ಬರೀ ಘೋಷಣೆ ಮಾಡಿ ಹೋಗ್ತೀರಾ ಕೆಲಸ ಮಾಡೋದು ನಾವೇ ಎಂದು ಪ್ರೀತಂಗೌಡ ಹೇಳಿದ್ದಾರೆ.
‘ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ’
ಇದ್ರಿಂದ ಕೆರಳಿದ ಸಚಿವ ರೇವಣ್ಣ ನಿಮ್ಮ ಸರ್ಕಾರ ಏನೂ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರೀತಂ, ರಾಜಕಾರಣ ಹೊರಗೆ ಮಾಡೋಣ ಇಲ್ಲಿ ಕೆಡಿಪಿ ಬಗ್ಗೆ ಮಾತಾಡಿ ಎಂದು ಹೇಳಿದ್ದಾರೆ. ಯಡಿಯೂರಪ್ಪ ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂದು ರೇವಣ್ಣ ಗುಡುಗಿದ್ದು, ಕೆಡಿಪಿ ಸಭೆಯಲ್ಲಿ ಯಡಿಯೂರಪ್ಪ ಹೆಸರು ಯಾಕೆ ತರ್ತೀರಾ..? ಯಡಿಯೂರಪ್ಪ ರಿಂದ ಏನು ಕೆಲಸ ಆಗಿದೆ ಎಂದು ಈ ಜಿಲ್ಲೆಯ ಜನರಿಗೆ ಗೊತ್ತಿದೆ. ನನ್ನ ಕ್ಷೇತ್ರದಲ್ಲಿ ಏನು ಕೆಲಸ ಆಗಬೇಕು ಎಂದು ನಾನು ಶಾಸಕ ಇದೀನಿ ಮಾತಾಡ್ತಿನಿ ಎಂದು ಪ್ರೀತಂ ಹೇಳಿದ್ದಾರೆ.
ಆಗ ರೇವಣ್ಣ ಇದು ಜಿಲ್ಲಾ ಕೇಂದ್ರ ಹಾಸನ ಕೇವಲ ಒಬ್ಬ ಕ್ಷೇತ್ರದ ಶಾಸಕನಿಗೆ ಸೇರಲ್ಲ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಇಬ್ಬರು ನಾಯಕರ ನಡುವೆ ನಡೆದ ವಾಗ್ವಾದ ನೋಡುತ್ತ, ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಕಂಗೆಟ್ಟು ಕೂತಿದ್ದರು.