Saturday, July 27, 2024

Latest Posts

ಪ್ರಜ್ವಲ್ ಹೆಸರು ಹೇಳದೇ ಕೇವಲ ಬಿಜೆಪಿ ನಾಯಕರ ಸಲಹೆಯಂತೆ ಕೆಲಸ ಮಾಡೋಣವೆಂದ ಪ್ರೀತಂಗೌಡ

- Advertisement -

Hassan News: ಹಾಸನ : ಹಾಸನದಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆದಿದ್ದು, ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮಾತನಾಡಿದ್ದಾರೆ.

ಎನ್‌ಡಿಎ ಒಕ್ಕೂಟ ಮುನ್ನೆಡಿಸುತ್ತಿರುವ ನರೇಂದ್ರಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ಎಲ್ಲರೂ ಹೋರಾಟ ಮಾಡುತ್ತಿದ್ದಾರೆ. ನರೇಂದ್ರಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಸೂರ್ಯ, ಚಂದ್ರ ಇರುವಷ್ಟೇ ಸತ್ಯ. ನಾವೆಲ್ಲರೂ ಯಾವುದೇ ಆತಂಕಕ್ಕೆ ಒಳಗಾಗದೆ ಕೆಲಸ ಮಾಡಬೇಕು. 1999 ರಲ್ಲಿ ನಾಲ್ಕು ಸ್ಥಾನ ಗೆದ್ದಿದ್ದವು. ರಾಜಕೀಯ ಸ್ಥಿತ್ಯಂತರ ನಂತರ ಬಿಜೆಪಿ ಅಭ್ಯರ್ಥಿಗೆ ಡಿಪಾಸಿಟ್ ಕೂಡ ಇರ್ತಿರಲಿಲ್ಲ. 2008 ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು. ರಾಜಕೀಯ ಪಲ್ಲಟದಿಂದ 110 ಸೀಟ್ ಬಂತು. ಆಗಲೂ ಕೂಡ ಜಿಲ್ಲೆಯಲ್ಲಿ ಡೆಪಾಸಿಟ್ ಸಿಗಲಿಲ್ಲ ಎಂದು ಹೇಳಿದರು.

2018 ರಲ್ಲಿ ಬಿಜೆಪಿಯಿಂದ ನಾನು ಶಾಸಕನಾದೆ. ನಾನು ನನ್ನ ಕ್ಷೇತ್ರ ಮಾತ್ರ ನೋಡಲಿಲ್ಲ. ಜಿಲ್ಲೆಯಲ್ಲಿ ಎಲ್ಲರ ಜೊತೆ ಪಕ್ಷ ಕಟ್ಟುವ ಕೆಲಸ ಮಾಡ್ದೆ. ಐದು ವರ್ಷದಲ್ಲಿ ಕಾಂಪ್ರಮೈಸ್ ರಾಜಕಾರಣ ಮಾಡಲಿಲ್ಲ. ಹೆದರಿಸಿದವರಿಗೆ ಹೆದರದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ವಿ. ಬಿಜೆಪಿಯಿಂದ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಈಗ ಇಬ್ಬರು ಶಾಸಕರು ಆಯ್ಕೆಯಾದರು. ಅದಕ್ಕೆ ನಮ್ಮ ನಡವಳಿಕೆ, ನಮ್ಮ ಹೋರಾಟ ಅವರಿಗೆ ಸ್ಪೂರ್ತಿ ಆಯ್ತು. 2023 ರಲ್ಲಿ ಯಡಿಯೂರಪ್ಪ ಅವರ ಆಶೀರ್ವಾದದಿಂದ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಈ ಎರಡನ್ನು ನಾಲ್ಕು ಮಾಡಬೇಕೆಂದರೆ ಇದೇ ಸ್ವಾಭಿಮಾನ, ಹೋರಾಟ ಮುಂದುವರೆಸಿಕೊಂಡು ಹೋಗಬೇಕು ಎಂದು ಪ್ರೀತಂಗೌಡ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್‌ನಿಂದ, ಜೆಡಿಎಸ್‌ನಿಂದ ತೊಂದರೆಯಾದರೆ ಈ ಪ್ರೀತಂಗೌಡ ಮೊದಲು ಬಂದು ನಿಲ್ತಾನೆ. ನಾವು ಮೋದಿಯವರಿಗೋಸ್ಕರ ರಾಜ್ಯ ನಾಯಕರ ಸೂಚನೆಯಂತೆ ನಡೆಯಬೇಕು. ಹಾಸನ ಜಿಲ್ಲೆಯಲ್ಲಿ ದಬ್ಬಾಳಿಕೆ, ಶೋಷಣೆ ಮಾಡಲು ಬಂದರೆ ಈ ಪ್ರೀತಂಗೌಡ ಬಿಡಲ್ಲ. ಯಾವೆಲ್ಲಾ ಕೆಲಸ ಹೇಳ್ತಾರೆ, ಸೂಚನೆ ಕೊಡ್ತಾರೆ ಅದನ್ನು ಮಾಡೋಣ. ನಾಳೆ ಬಿ.ವೈ.ವಿಜಯೇಂದ್ರ ಅವರು ಬರ್ತಾರೆ. ಅವರಿಗೆ ಗೌರವ ಕೊಡುವ ಕೆಲಸ ಮಾಡೋಣ. ರಾಷ್ಟ್ರಮಟ್ಟದಲ್ಲಿ ಏನು ಮೈತ್ರಿ ಆಗಿದೆ ಅದರಲ್ಲಿ ಉದ್ದೇಶ ಇದೆ. ನಾನು ಎರಡು ಮಂಡಲ ಬರುತ್ತೆ, ಅಲ್ಲೂ ಹೋಗಬೇಕು, ಇಲ್ಲಿಗೂ ಬರ್ತೇನೆ ಎಂದು ಪ್ರೀತಂಗೌಡ ಹೇಳಿದ್ದಾರೆ. ಆದರೆ ಇವರೆಲ್ಲಿಯೂ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ನೀಡಿ ಎಂದು ಹೇಳಲಿಲ್ಲ. ಎಲ್ಲಿಯೂ ಪ್ರೀತಂಗೌಡ, ಪ್ರಜ್ವಲ್ ರೇವಣ್ಣ ಹೆಸರು ಹೇಳಲೇ ಇಲ್ಲ. ಕೇವಲ ಬಿಜೆಪಿ ನಾಯಕರ ಸೂಚನೆಯಂತೆ ಕರೆಕೊಟ್ಟಿದ್ದಾರೆ.

ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ

ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ: ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿಶ್

ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss