Hassan News: ಹಾಸನ : ಹಾಸನದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಮಾತನಾಡಿದ್ದು, ನಿನ್ನೆ ಮೈಸೂರಿನಲ್ಲಿ ಸಭೆ ಯಶಸ್ವಿಯಾಗಿ ನಡೆದಿದೆ. ಸಭೆಯಲ್ಲಿ ನಡೆದಿದ್ದನ್ನು ಹೇಳಬೇಡಿ ಎಂದು ಸೂಚನೆ ಕೊಟ್ಟಿದ್ದಾರೆ. ಸಭೆಯಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಏನನ್ನು ಹೇಳಬೇಡಿ ಅಂತ ಸೂಚನೆ ಕೊಟ್ಟಿದ್ದಾರೆ. ಪಾರ್ಟಿ ಚಟುವಟಿಕೆಗಳು ನಡಿತಿದೆ. ಮಾ.15 ರೊಳಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬಹುದು ಎಂದು ಹೇಳಿದರು..
ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರೀತಂ, ನಾನು ಇನ್ನೂ ಗಮನಿಸಿಲ್ಲ, ಗಮನಿಸುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ನಿರ್ಧರಿಸುತ್ತಾರೆ. ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಇದ್ದಾರೆ, ಬಿ.ವೈ.ವಿಜಯೇಂದ್ರ ಇದ್ದಾರೆ. ಪ್ರೀತಂಗೌಡ 2018 ರಲ್ಲಿ ಏನಾಗಿದ್ದ, 2023 ರಲ್ಲಿ ಏನಾದ 2028 ಏನಾಗ್ತಾನೆ ಮುಂದೆ ನೋಡಬಹುದು. 2023 ರಲ್ಲಿ ಸೋಲಿಸಿ ಅಂದಿದ್ದಾರೆ, ಈಗ ತಮ್ಮ ಅಂದಿದ್ದಾರೆ ಮುಂದೆ ಏನು ಅಂತಾರೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಮಾತಿಗೆ ಪ್ರೀತಂ ಪ್ರತಿಕ್ರಿಯಿಸಿದ್ದಾರೆ.
ನಾನು ರಾಜಕೀಯದಲ್ಲಿ ಶಕ್ತಿಯುತವಾಗಿ ಬೆಳೆಯಬೇಕಾದರೆ ಬಿ.ಸಿ.ಯಡಿಯೂರಪ್ಪ ಅವರ ಆಶೀರ್ವಾದ ಕಾರಣ. ನಾನು ಯುವಕ ಇರೋದಕ್ಕೆ 78 ಸಾವಿರ ಮತಗಳನ್ನು ಹಾಕಿದ್ದಾರೆ. ಅವರು ಹಿರಿಯರಿದ್ದಾರೆ, ಜಾಸ್ತಿ ಮಾತನಾಡಲ್ಲ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. 2023 ರಲ್ಲಿ ಸೋಲಿಸಿ ಅಂದರು, ಈಗ ತಮ್ಮ ಅನ್ನುತ್ತಿದ್ದಾರೆ, 2028 ರಲ್ಲಿ ಏನು ಹೇಳುತ್ತಾರೋ ಗೊತ್ತಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.
‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’
ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್: ಸಚಿವ ಕೆ.ಎನ್.ರಾಜಣ್ಣ



