Sunday, December 22, 2024

Latest Posts

ಪ್ರಧಾನಿ ಮೋದಿಯನ್ನು ‘ನಾಲಾಯಕ್ ಬೇಟಾ’ ಎಂದ ಪ್ರಿಯಾಂಕ್ ಖರ್ಗೆ..

- Advertisement -

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರನ್ನು ವಿಷಸರ್ಪ ಎಂದು ಹೇಳಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ನಂತರ ಟ್ವೀಟ್ ಮಾಡುವ ಮೂಲಕ ಖರ್ಗೆ ಇದಕ್ಕೆ, ಸಮಝಾಯಿಷಿ ಕೊಟ್ಟಿದ್ದರು. ಇದೀಗ ಖರ್ಗೆ ಮಗನ ಸರದಿ. ಮೋದಿ ಕೊಟ್ಟ ಹೇಳಿಕೆಯನ್ನಿಟ್ಟುಕೊಂಡು, ಪ್ರಿಯಾಂಕ್, ಮೋದಿಯನ್ನು ನಾಲಾಯಕ್ ಬೇಟಾ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಈ ಹಿಂದೆ ಮೋದಿ ಕರ್ನಾಟಕಕ್ಕೆ ಬಂದಾಗ, ಲಂಬಾಣಿ ಜನಾಂಗದವರನ್ನು ಕುರಿತು, ಬಂಜಾರಾ ತಾಯಂದಿರೇ, ನೀವು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ನೀವು ಹೆದರಬೇಡಿ, ನಿಮ್ಮ ಮಗ ದೆಹಲಿಯಲ್ಲಿ ಕೂತಿದ್ದಾನೆ ಎಂದು ಹೇಳಿದ್ದರು. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು, ವ್ಯಂಗ್ಯವಾಡಿರುವ ಪ್ರಿಯಾಂಕ್ ಖರ್ಗೆ, ನೀವೇನು ಹೇಳಿದ್ರಿ, ಬಂಜಾರ ತಾಯಂದಿರೇ, ನೀವ್ಯಾರು ಹೆದರಬೇಡಿ, ದೆಹಲಿಯಲ್ಲಿ ನಿಮ್ಮ ಮಗ ಕೂತಿದ್ದಾನೆ ಎಂದು ಹೇಳಿದ್ದಿರಿ.

ಇಂಥ ನಾಲಾಯಕ್ ಮಗ ಇದ್ದರೆ, ಹೇಗೆ..? ಮನೆಯಾದರೂ ಹೇಗೆ ನಡೆಯುತ್ತದೆ..? ಯಾರದ್ದೇ ಮಗ ನಾಲಾಯಕ್ ಇದ್ದರೂ ಮನೆ ನಡೆಸಲು ಆಗುವುದಿಲ್ಲ. ನಿಮಗೊಬ್ಬ ಮಗನಿದ್ದಾನೆ ಅಂತಾ ಹೇಳಿ, ರಿಸರ್ವೇಶನ್‌ನಲ್ಲಿ ಗೊಂದಲ ಸೃಷ್ಟಿಸಿಬಿಟ್ಟರಲ್ಲ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ. ಈ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್ ಪಕ್ಷ ಹಿಂದೆಯೂ ಶ್ರಮಿಕರ ಜೊತೆ ನಿಂತಿತ್ತು, ಮುಂದೆಯೂ ನಿಲ್ಲಲಿದೆ. ‘

ಚೆನ್ನೈ ಏರ್ಪೋರ್ಟ್‌ನಲ್ಲಿ ಮಹಿಳೆಯ ಬ್ಯಾಗ್ ಚೆಕ್ ಮಾಡಿದವರಿಗೆ ಕಾದಿತ್ತು ದೊಡ್ಡ ಶಾಕ್..

ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..

- Advertisement -

Latest Posts

Don't Miss