Monday, July 22, 2024

Latest Posts

ಪ್ರಜಾಕೀಯದಿಂದ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ..!!

- Advertisement -

ಪ್ರಿಯಾಂಕಾ ಉಪೇಂದ್ರ ಕ್ರಾಂತಿ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಪತಿಯ ಪ್ರಜಾಕೀಯದ ಪರಿಕಲ್ಪನೆಯನ್ನೆ ಮೂಲ ಮಂತ್ರವಾಗಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಲ್ವೇ ರಿಯಲ್ ರಾಜಕಾರಣ ಅನ್ನೋ ಮಟ್ಟಿಗೆ ಪ್ರಿಯಾಂಕಾ ಉಪೇಂದ್ರ ರಾಜಕೀಯದಲ್ಲಿ ಕ್ರಾಂತಿ ಮಾಡಲಿದ್ದಾರೆ.

ಪ್ರಿಯಾಂಕಾ ಉಪೇಂದ್ರ ರಿಯಲ್ ಆಗಿ ರಾಜಕೀಯಕ್ಕೆ ಏನೂ ಬರ್ತಿಲ್ಲ. ಬಂದಿಯೂ ಇಲ್ಲ. “ಪ್ರಜೆಯೇ ಪ್ರಭು” ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿಯೇ ರಾಜಕಾರಣಿಯಾಗಿಯೂ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಕೂಡ ಹೊರ ಬಿದ್ದಿದೆ.

ಪ್ರಜಾಕೀಯ ಪರಿಕಲ್ಪನೆಯನ್ನೆ ಈ ಚಿತ್ರದಲ್ಲಿ ಬಳಸಲಾಗಿದೆ. ಎಲ್ಲವೂ ಅಲ್ಲ. ಕೆಲವು ಕಾನ್ಸೆಪ್ಟ್​ ಅನ್ನೇ ಚಿತ್ರದಲ್ಲಿ ಇಡಲಾಗಿದೆ. ಎಲ್ಲರೂ ಕೆಲಸ ಮಾಡಬೇಕು ಅನ್ನೋದು ಒಂದು. ಪಾರದರ್ಶಕತೆ ಇರಲೇಬೇಕು ಅನ್ನೋದು ಇನ್ನೊಂದು ಹೀಗೆ ಉಪ್ಪಿಯ ಕಾನ್ಸೆಪ್ಟ್​ಗಳು ಈ ಚಿತ್ರದಲ್ಲಿವೆ.

- Advertisement -

Latest Posts

Don't Miss