Political News: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ.ಸಾರ್ವಜನಿಕರ ಆಸ್ತಿ ನಷ್ಟ ಬರಿಸೋರು ಯಾರು..? ಅತೀ ಹೆಚ್ಚು ಹಿಂದೂಗಳು ತೆರಿಗೆ ನೀಡುತ್ತಾರೆ. ಗಲಭೆಕೋರರಿಂದ ಆಸ್ತಿ ನಷ್ಟವನ್ನು ಒದ್ದು ವಸೂಲಿ ಮಾಡಬೇಕು. ಸರ್ಕಾರಕ್ಕೆ ತಾಕತ್ತು ಇದ್ದ್ರೆ ಇದನ್ನು ಮಾಡಲಿ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ..
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಘಟನೆ ಪೂರ್ವ ತಯಾರಿಯಿಂದ ಆಗಿದೆ ಇದು ಸಂಪೂರ್ಣ ತನಿಖೆಯಾಗಬೇಕು.. ಇದು ಅತ್ಯಂತ ಗಂಭೀರವಾದ ವಿಷಯ.. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ
ಪಿಎಫ್ ಐ, ಎಸ್ ಡಿಪಿಐ, ಕೇಸ್ ವಾಪಸು ಪಡೆದ್ರು, ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿಯಿಂದ ಅವರಿಗೆ ದೊಡ್ಡ ಕುಮ್ಮಕ್ಕು ಬಂದಿದೆ.. ಇಸ್ಲಾಂ ಮತಾಂಧ ಶಕ್ತಿಗಳು ಕಾಂಗ್ರೆಸ್ ಬೆಂಬಲದಿಂದ ಈ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಡಬಿಡಂಗಿತನದಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಇಲ್ಲ ನಮ್ಮ ರಾಜ್ಯದಲ್ಲಿ ಸಹ ನಿಮ್ಮನ್ನು ಕಿತ್ತೊಗೆಯುತ್ತಾರೆ. ಕಾಂಗ್ರೆಸ್ ನವರಿಗೆ ಮುಸ್ಲಿಂ ಅವರು ಮಾತ್ರ ಬೇಕಾ?. ಈ ಘಟನೆಯನ್ನು ಸಹ ಕಾಂಗ್ರೆಸ್ ಇದನ್ನು ತುಷ್ಟಿಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ.. ಗೃಹ ಸಚಿವರು ತಮ್ಮ ಐಡಿಯಾಲಜಿ ತಕ್ಕಂತೆ ಮಾತನಾಡನಾಡುತ್ತಾರೆ.. ಇದು ಕಮ್ಯುನಿಸ್ಟ್, ಕೇರಳ ಬೆಂಬಲ ಇಲ್ಲದ ಈ ರೀತಿ ನಡೆಯೊಲ್ಲಾ..ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು.. ಆರ್ ಎಸ್ ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿಮತಾಂಧ ಶಕ್ತಿ ವ್ಯವಸ್ಥಿತ ಪ್ಲಾನ್ ಮಾಡಿಕೊಂಡು ಈ ರೀತಿಯಲ್ಲಿ ಮಾಡಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ಪಾರ್ಟಿ ಪರಸ್ಪರ ಭಿನ್ನಾಭಿಪ್ರಾಯದಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರಿದೆ.ದಲಿತ ಸಿಎಂ ಆಗಲು ನಮ್ಮ ವಿರೋಧ ಇಲ್ಲ. ಆದರೆ ಇದನ್ನು ಹಾದಿ ಬಿದಿ ರಂಪ ಮಾಡಿ ಆಡಳಿತಯಂತ್ರ ಕುಸಿಯುವಂತೆ ಮಾಡಿದೆ..ಇದನ್ನು ಸಹಿಸಲು ಆಗಲ್ಲ ಎಂದರು..ರಾಹುಲ್ ಗಾಂಧಿ ಸಿರಿಯಸ್ ರಾಜಕಾರಣಿ ಅಲ್ಲಾಅವರ ಬಗ್ಗೆ ಹೆಚ್ಚು ಮಾತನಾಡೋ ಅವಶ್ಯಕತೆ ಇಲ್ಲ ಇದೆ ಅದಾನಿ, ಅಂಬಾನಿ ಅಂತ ಎಷ್ಟು ವರ್ಷ ತೆಗೆದುಕೊಂಡು ಹೋಗತ್ತಿರಿ..ಕೃಷಿ, ಸಣ್ಣ, ದೊಡ್ಡ ವ್ಯಾಪಾರ ದೇಶಕ್ಕೆ ಬೇಕು ಇದನ್ನು ಬಿಟ್ಟು ಅಂಬಾನಿ, ಅದಾನಿಗೆ ಏನು ವಿಶೇಷ ಸವಲತ್ತು ನೀಡಿದೆ ಹೇಳಿ ಅಂತ ಜೋಶಿ ಪ್ರಶ್ನೆ ಮಾಡಿದ್ದಾರೆ.