Bengaluru News: ಬೆಂಗಳೂರು: ಕೆಪಿಟಿಸಿಎಲ್ ಮತ್ತು ಎಸ್ಕಾಂ ಹೊರಗುತ್ತಿಗೆ ನೌಕರರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ, ಹಲವು ಬೇಡಿಕೆಗಳನ್ನು ಇಟ್ಟರು.
ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನಾಕಾರರು ಆಗಮಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಮಗೆ ಸೇವಾ ಭದ್ರತೆ ಒದಗಿಸಬೇಕು. ಹೊರಗುತ್ತಿಗೆ ನೌಕರರ ಸೇವೆಯನ್ನು ಖಾಯಂ ಮಾಡಬೇಕು. ಖಾಯಂ ಆಗುವವರೆಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿದ್ಯುತ್ ಅಪಘಾತದಲ್ಲಿ ಹುತಾತ್ಮರಾದರೆ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ವಿಕಲಚೇತನರಾದರೆ 25 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೇ, ಈಗಾಗಲೇ ಸಾವನ್ನಪ್ಪಿದವರಿಗೆ ಹಾಗೂ ವಿಕಲ ಚೇತನರಾದವರಿಗೆ ಪರಿಹಾರ ಘೋಷಿಸಬೇಕು. ಗುತ್ತಿಗೆ ಪದ್ಧತಿಯಿಂದ ನೌಕರರನ್ನು ಮುಕ್ತಿಗೊಳಿಸಬೇಕು. ಇಲಾಖೆಯಿಂದಲೇ ನೌಕರರಿಗೆ ವೇತನವನ್ನು ನೇರ ಪಾವತಿ ಮಾಡಬೇಕು. ವಜಾ ಗೊಂಡಿರುವ ನೌಕರರ ಮರು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಪಕ್ಷದ ನಾಯಕನ ಸ್ಥಾನ ಆಗಸ್ಟ್ 15 ರ ನಂತರ ತೀರ್ಮಾನ: ಬಸವರಾಜ ಬೊಮ್ಮಾಯಿ
ಗೃಹಲಕ್ಷ್ಮೀ ಯೋಜನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆಶಿ ಸಭೆ..
‘ರಾಹುಲ್ ಗಾಂಧಿ ಮಧ್ಯಪ್ರವೇಶಿಸಲಿ: ಇಲ್ಲದಿದ್ದರೆ ಕರ್ನಾಟಕ ಎಟಿಎಂ ಅಂತ ಸಾಬೀತು’