ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಔಷಧಿ ಮಾರಾಟಗಾರರಿಂದ ಪ್ರತಿಭಟನೆ

Hubballi News: ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ವತಿಯಿಂದ ಚನ್ನಮ್ಮ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಇನ್ನು ಕರ್ನಾಟಕ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳು ಕೆಲಸವನ್ನು ಬಹಿಷ್ಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿ ಮಾಡಿರುತ್ತಿರುವ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳು, ಪೆಟ್ರೋಲ್ ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ, ಜೀವನಾವಶ್ಯಕ ಔಷಧಿಗಳ ಮೇಲಿನ ಜಿ.ಎಸ್.ಟಿ. ಯಿಂದ ಔಷಧಗಳ ಬೆಲೆ ಏರಿಕೆ, ಜಿಲ್ಲಾ ಆಸ್ಪತ್ರೆಗಳನ್ನ ಪಬ್ಲಿಕ್ ಪೈವೇಟ್ ಪಾರ್ಟ್ ನರ್ಶಿಪ್(ಪಿ.ಪಿ.ಪಿ.) ಅಡಿಯಲ್ಲಿ ತರುವ ಮೂಲಕ ಮಾಡುತ್ತಿರುವ ಖಾಸಗೀಕರಣ, ಸರ್ಕಾರಿ ಆಸ್ಪತ್ರೆಗಳಿಗೆ ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿದ್ದ ಔಷಧ & ಜೀವ ರಕ್ಷಕ ವ್ಯಾಕ್ಸಿನ್ ಉತ್ಪಾದನಾ ಘಟಕಗಳ ಷೇರುಗಳನ್ನು ಬಿಡಿಗಾಸಿಗೆ ಖಾಸಗೀ ಬಂಡವಾಳಿಗರಿಗೆ ಮಾರಾಟ ಮಾಡುತ್ತಿರುವುದು, ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಜನೌಷಧಿಗಳ ಮೂಲಕ ಕೊಡುವುದಾಗಿ ಪ್ರಚಾರ ಮಾಡಿದ ಕೇಂದ್ರ ಸರ್ಕಾರವು, ಜನೌಷಧಿ
ಮಳಿಗೆಗಳನ್ನ ಮೊಟ್ಟ ಮೊದಲಿಗೆ ಪ್ರಾರಂಭಿಸಿದ್ದು, ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ, ಈ ಎಲ್ಲಾ ಅನ್ಯಾಯಗಳು ದೇಶದ ಕಾರ್ಮಿಕ ವರ್ಗ ತ್ಯಾಗ ಬಲಿದಾನಗಳ ಮೂಲಕ ಗಳಿಸಿರುವ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ.

ಔಷಧಿಗಳ ಎಂ.ಆರ್.ಪಿ. ಮೇಲೆ ಪ್ರತೀ ವರ್ಷ ಶೇ.೧೦ ರಷ್ಟು ಬೆಲೆ ಹೆಚ್ಚಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿದೆ. ಇದರಿಂದಾಗಿ ಇಡೀ ಆರೋಗ್ಯ ಕ್ಷೇತ್ರವೇ ಖಾಸಗೀಯವರ ದಾಳಕ್ಕೆ ಸಿಲುಕಿದೆ. ಪರಿಣಾಮವಾಗಿ ಅಲ್ಲಿ ಚಿಕಿತ್ಸೆ ಪಡೆಯುವುದು ಸಂಪೂರ್ಣ ಹಣದ ವ್ಯವಹಾರದ ಮೇಲೆ ನಿಂತಿದೆ, ಇದರಿಂದ ರೋಗಿಗಳ ಜೀವ ಸದಾ ಅಪಾಯದಲ್ಲಿದೆ. ಇದಲ್ಲದೆ ಔಷಧಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಔಷಧಿ ಮಾರಾಟ ಪ್ರತಿನಿಧಿಗಳಿಗೆ ಯಾವುದೇ ಕನಿಷ್ಟವೇತನ, ಸಾಮಾಜಿಕ ಭದ್ರತೆ ಎಂಬುದೇ ಇಲ್ಲ. ಇಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಎಂಬುದು ನಿತ್ಯ ನಡೆಯುತ್ತಲೇ ಇದೆ. ಹೀಗೆ ಹಲವಾರು ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.

‘ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ನೆರವು ನೀಡುತ್ತಾರೆಂದು ಭಾವಿಸಿದ್ದೇನೆ’

ಬಿಜೆಪಿಗೆ ನಾನೇ ಟಾರ್ಗೆಟ್ ಆಗ್ತಿದ್ದೇನೆ! ನನ್ನ ಬಗ್ಗೆ ಅವರಿಗೆ ಈಗ ಅರ್ಥವಾಗಿದೆ ಎಂದ ಶೆಟ್ಟರ್

‘ಬಿಜೆಪಿಯ ಪಕ್ಷದ MPಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ಅಧಿವೇಶನ ನಡೆಸುವುದು ನಾಚಿಕೆಗೇಡು’

About The Author