Saturday, July 27, 2024

Latest Posts

ಸಿಎಂ ಜನತಾದರ್ಶನಕ್ಕೆ ತಟ್ಟಿದ ಪ್ರತಿಭಟನೆಯ ಬಿಸಿ..!

- Advertisement -

ಯಾದಗಿರಿ: ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಜನತಾದರ್ಶನ ವೇಳೆ ಜನರು ನ್ಯಾಯ ಬೇಕು ಅಂತ ಜೋರಾಗಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಚಂಡರಕಿ ಗ್ರಾಮಕ್ಕೆ ಗ್ರಾಮವಾಸ್ತವ್ಯಕ್ಕೆ ತೆರಳಿರೋ ಸಿಎಂ ಎಚ್.ಡಿ ಕುಮಾರಸ್ವಾಮಿ ಅಲ್ಲೇ ಇಂದು ಜನತಾದರ್ಶನ ಕಾರ್ಯಕ್ರಮ ಕೈಗೊಂಡಿದ್ದಾರೆ. ಸಿಎಂರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸೋದಕ್ಕೆ ಸಾವಿರಾರು ಮಂದಿ ಸೇರಿದ್ದು, ನಾ ಮುಂದು ತಾ ಮುಂದು ಅಂತ ಮುಗಿಬೀಳ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯ ಬೇಕು ಅಂತ ಘೋಷಣೆ ಕೂಡ ಕೂಗಿದ್ದಾರೆ. ಈ ವೇಳೆ ವಿಶೇಷ ಚೇತನರೂ ಅಸಹಾಯಕರಾಗಿ ಘೋಷಣೆ ಕೂಗುತ್ತಿದ್ರು. ಇದನ್ನು ಕಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಶೇಷಚೇತನರ ಬಳಿ ತೆರಳ ಅವರ ಅಹವಾಲು ಸ್ವೀಕರಿಸಿದ್ದಾರೆ.

ಆದ್ರೆ ಇನ್ನೂ ಘೋಷಣೆ ಕೂಗುತ್ತಾ ನಿಂತಿದ್ದ ಮಂದಿ ಎಷ್ಟೇ ಹೇಳಿದ್ರೂ ಪಟ್ಟು ಬಿಡದೆ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಿಮ್ಮ ಸಮಸ್ಯೆ ಏನೇ ಇದ್ರೂ ನಾನು ಬಗೆಹರಿಸ್ತೇನೆ. ರಾತ್ರಿ 8 ಗಂಟೆಯಾದ್ರೂ ಪರವಾಗಿಲ್ಲ, ಎಲ್ಲರ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸ್ತೇನೆ ಅಂತ ಭರವಸೆ ನೀಡಿದ್ರು. ಅಲ್ಲದೆ ಹೀಗೆ ಸುಮ್ಮನೆ ಹೀಗೆ ಕೂಗಾಡಬೇಡಿ ಅಂತ ಸಿಎಂ ಮನವಿ ಮಾಡಿದ್ರು. ಆದ್ರೂ ಸಹ ಕೂಗಾಟ ಮುಂದುವರಿದದ್ರಿಂದ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಮತ್ತು ವೆಂಕಟರಾವ್ ನಾಡಗೌಡ ಸಹ ಪ್ರತಿಭಟನಾಕಾರ ಮನವೊಲಿಸಲೆತ್ನಸಿದ್ರು. ಆದ್ರೆ ಯಾವುದೇ ಪ್ರಯೋಜನವಾಗದ್ರಿಂದ ಕೂಗಾಟದ ನಡುವೆ ಸಿಎಂ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದೆ.

ನಾನು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೇನೆ ಎಂದಿರೋ ಗೌಡರ ಬೇಸರಕ್ಕೆ ಕಾರಣವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=QLQ5pKatVlk
- Advertisement -

Latest Posts

Don't Miss