ರೌಡಿಯಿಂದ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ: ಕೂದಲೇಳೆಯ ಅಂತರದಲ್ಲಿ ಪಾರಾದ ಪಿಎಸ್ಐ ವಿನೋದ್

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಟೋರಿಯಸ್ ರೌಡಿ ಮೇಲೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಹೌದು ಕೊಲೆ ಮಾಡಲು ಹೊಂಚು ಹಾಕಿ ಕುಳಿತಿದ್ದ ನಟೋರಿಯಸ್ ರೌಡಿಯನ್ನ ಶನಿವಾರ ಮಧ್ಯಾಹ್ನ ಸಿನಿಮಾ ರೀತಿಯಲ್ಲಿ ಶಹರ ಪೊಲೀಸ್ ಠಾಣೆಯ ಪಿಎಸ್ಐ ವಿನೋದ್ ಅವರ್ ಟೀಮ್ ಅರೆಸ್ಟ್ ಮಾಡಿದ್ದಾರೆ.

ಸದ್ಯ ಅರೆಸ್ಟ್ ಮಾಡಿದ ಸಿಸಿಟಿವಿ ವಿಡಿಯೋ ದೊರತಿವೆ. ಸಾರ್ವಜನಿಕ ಸ್ಥಳದಲ್ಲೇ ಕೈಯಲ್ಲಿ ತಲ್ವಾರ್ ಹಿಡಿದು ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ನಟೋರಿಯಸ್ ರೌಡಿ ಸತೀಶ್ ಗೋನಾ ವ್ಯಕ್ತಿ ಓರ್ವನಿಗೆ ಫೋನ್ ಮಾಡಿ ನಿನ್ನ ಮರ್ಡರ್ ಮಾಡ್ತೀನಿ ಅಂತ ಅವಾಜ್ ಹಾಕಿದ್ದ.

ಕೈಯಲ್ಲಿ ತಲ್ವಾರ್ ಹಿಡಿದು ಕೊಲೆ ಮಾಡಲು ಹುಬ್ಬಳ್ಳಿಯ ಗದಗ ರಸ್ತೆಯ ರೈಲ್ವೆ ಬ್ರಿಜ್ ಬಳಿ ಕಾಯುತ್ತಾ ಕುಳಿತಿದ್ದ. ಈ ಕುರಿತು ಮಾಹಿತಿ ಬರುತ್ತಿದ್ದಂತೆ ರೌಡಿ ಸತೀಶ್ ನನ್ನ ಸಿನಿಮಿಯ ರೀತಿಯಲ್ಲಿ ಪಿಎಸ್ಐ ವಿನೋದ್ ಅರೆಸ್ಟ್ ಮಾಡಿದ್ದಾರೆ.

ಇನ್ನೂ ರೌಡಿ ಸತೀಶ್ ನನ್ನ ಸಾಯಂಕಾಲ ಸ್ಥಳ ಮಹಜರು ಮಾಡಲು ಕರೆತಂದಿದ್ದ ಸಮಯದಲ್ಲಿ. ನಾನು ಜೈಲಿಗೆ ಹೋಗಲು ಇವನೇ ಕಾರಣ ಎಂದು ಸೇಡು ತೀರಿಸಿಕೊಳ್ಳಲು ಪಿಎಸ್ಐ ವಿನೋದ್ ದೊಡ್ಡ ಲಿಂಗಪ್ಪನವರ ಮೇಲೆ ಮಾರಣಾಂತಿಕ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಗಾದ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದರಿಂದ ಸತೀಶ್ ಗೋನಾ ಮೇಲೆ ಶಹರ ಠಾಣೆ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಅವರು ಸತೀಶ್ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಇದೇ ಮೊದಲು ಬಾರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟದಲ್ಲಿ ಒಬ್ಬ ನಟೋರಿಯಸ್ ರೌಡಿ ಮೇಲೆ ಎನ್ಕೌಂಟರ್ ಆಗಿದೆ. ಈ ಪ್ರಕರಣವನ್ನ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’

ಕರ್ನಾಟಕ ಟಿವಿ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ

ಸೋಮಣ್ಣರಿಗೆ ನಾನು ಸಪೋರ್ಟ್ ಮಾಡ್ತೀನಿ: ಸಂಸದ ಜಿ.ಎಸ್.ಬಸವರಾಜ್

About The Author