www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿರೋ ಹಿನ್ನೆಲೆಯಲ್ಲಿ ಅವರ ಅಪಾರ ಅಭಿಮಾನಿಗಳ ಬಳಗ ತೀವ್ರ ಆತಂಕ್ಕೀಡಾಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಾಣಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ.
ಕೆಲವರು ಸುದ್ದಿ ಕೇಳಿ ಕಣ್ಣೀರಿಡುತ್ತಿದ್ರೆ ಇನ್ನು ಕೆಲವರು ಒಮ್ಮೆಯಾದ್ರೂ ಪುನೀತ್ ರನ್ನು ನೋಡಬೇಕು ಅಂತ ಆಸ್ಪತ್ರೆಯೆದುರು ದುಂಬಾಲು ಬೀಳುತ್ತಿದ್ದಾರೆ. ಆಸ್ಪತ್ರೆಯೆದುರು ನೆರೆದಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಈಗಾಗಲೇ ಪೊಲೀಸರು ನಿಯೋಜನೆಗೊಂಡಿದ್ದು, ಆಸ್ಪತ್ರೆ ಸುತ್ತ ಮುತ್ತಲೂ ಬ್ಯಾರಿಕೇಡ್ ಹಾಕಿದ್ದಾರೆ. ಇನ್ನು ಆಸ್ಪತ್ರೆ ಮೂಲಗಳ ಪ್ರಕಾರ ಪುನೀತ್ ರಾಜ್ ಕುಮಾರ್ ರವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ದೊಡ್ಮನೆ ಹುಡುಗ, ಅಪ್ಪು ಶೀಘ್ರವೇ ಗುಣಮುಖರಾಗಲಿ ಅಂತ ಕರುನಾಡಿನ ಮುಕ್ಕೋಟಿ ಜನತೆ ಹಾಗೂ ಅವರ ಅಪಾರ ಅಭಿಮಾನಿ ಬಳಗ ಪ್ರಾರ್ಥಿಸುತ್ತಿದೆ