Monday, December 23, 2024

Latest Posts

ನಟ ಪುನೀತ್ ರಾಜಕುಮಾರ್ ಗೆ ಲಘು ಹೃದಯಾಘಾತ..!

- Advertisement -

www.karnatakatv.net : ಪುನೀತ್ ರಾಜಕುಮಾರ್ ಗೆ ಲಘು ಹೃದಯಾಘಾತವಾಗಿದ್ದು ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬೆಳಗಿನ ಜಾವ ಪುನೀತ್ ಜಿಮ್ ಗೆ ಹೋದಾಗ ಸ್ವಲ್ಪ ಆರೋಗ್ಯದಲ್ಲಿ ಏರುಪೆರಾಗಿ ಕುಸಿದು ಬಿದ್ದಿದ್ದಾರೆ, ನಂತರ ಅವರನ್ನು ರಮಣಿಯ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಅಲ್ಲಿಂದ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿದೆ. ಇಂದು ಬೆಳಗ್ಗೆ ಪುನೀತ್ ರಾಜ್ ಕುಮಾರ್ ಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿ ತೀವ್ರ ಸುಸ್ತಿನಿಂದ ಬಳಲುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ರನ್ನು ಬೆಂಗಳೂರಿನ ರಮಣ ಶ್ರೀ ಆಸ್ಪತ್ರೆಗೆ ಕರೆದೊಯ್ದಿದ್ರು. ಆದ್ರೆ ರಮಣ ಶ್ರೀ ಆಸ್ಪತ್ರೆ ವೈದ್ಯರು ವಿಕ್ರಂ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ರು. ಇನ್ನು ಸದ್ಯ ವಿಕ್ರಂ ಆಸ್ಪತ್ರೆಗೆ ದಾಖಲಾಗಿರೋ ಪುನೀತ್ ರಾಜ್ ಕುಮಾರ್ ರವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ವೈದ್ಯರು ಕೂಡ ಇಸಿಜಿ ಸೇರಿದಂತೆ ಮತ್ತಿತರ ಪರೀಕ್ಷೆಗಳನ್ನು ನಡೆಸಿದ್ದಾರೆ. ಸದ್ಯ ಪುನೀತ್ ರಿಗೆ ತಜ್ಞವೈದ್ಯರ ತಂಡದಿoದ ಚಿಕಿತ್ಸೆ ಮುಂದುವರಿದಿದ್ದು, ಇನ್ನು 48 ಗಂಟೆಗಳ ಕಾಲ ಅವರನ್ನು ಅಬ್ಸರ್ವೇಷನ್ ನಲ್ಲಿಸಲಾಗುತ್ತೆ ಅಂತ ತಿಳಿದು ಬಂದಿದೆ.

ಇನ್ನು ಅಪಾರ ಸಂಖ್ಯೆಯಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಸ್ಪತ್ರೆಯತ್ತ ತೆರಳಬಹುದೆಂದು ಪೊಲೀಸರು ಈಗಾಗಲೇ ವಿಕ್ರಂ ಆಸ್ಪತ್ರೆ ಸುತ್ತ ಮುತ್ತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನು ಇಂದು ಶಿವಣ್ಣನ ಭಜರಂಗಿ -2 ಚಿತ್ರ ಕೂಡ ರಿಲೀಸ್ ಆಗಿದ್ದು, ಅದಲ್ಲಿ ಬ್ಯುಸಿಯಾಗಿದ್ದ ಶಿವಣ್ಣ ಕೂಡ ಸದ್ಯ ವಿಕ್ರಂ ಆಸ್ಪತ್ರೆಯತ್ತ ಧಾವಿಸಿದ್ದಾರೆ.

ಇನ್ನು ತಮ್ಮ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ರಿಗೆ ಹೀಗೆ ಹೃದಯಾಘಾತವಾಗಿರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿ ಆತಂಕ ಸೃಷ್ಟಿಸಿದೆ.

- Advertisement -

Latest Posts

Don't Miss